ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ | 3 ತಿಂಗಳಲ್ಲಿ ಎಲ್ಲರಿಗೂ ಲಸಿಕೆ: ಅರವಿಂದ್‌ ಕೇಜ್ರಿವಾಲ್‌

Last Updated 8 ಮೇ 2021, 14:06 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಪ್ರತಿ ತಿಂಗಳು 85 ಲಕ್ಷ ಕೋವಿಡ್‌ ಲಸಿಕೆ ಡೋಸೆಜ್‌ಗಳನ್ನು ಪೂರೈಕೆ ಮಾಡಿದರೆಮುಂದಿನ 3 ತಿಂಗಳಲ್ಲಿ ದೆಹಲಿಯ ಎಲ್ಲರಿಗೂಲಸಿಕೆ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಶನಿವಾರ ತಿಳಿಸಿದ್ದಾರೆ.

ದೆಹಲಿಯಲ್ಲಿ ಪ್ರತಿದಿನ ಸುಮಾರು 1 ಲಕ್ಷ ಡೋಸ್ ಲಸಿಕೆಗಳನ್ನು ನೀಡಲಾಗುತ್ತಿದ್ದು, ಈ ಪ್ರಮಾಣವನ್ನು 3 ಲಕ್ಷಕ್ಕೆ ಹೆಚ್ಚಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ದೆಹಲಿಯಲ್ಲಿ ಲಸಿಕೆ ನೀಡುವ ವ್ಯವಸ್ಥೆ ಉತ್ತಮವಾಗಿರುವುದರಿಂದ ಪಕ್ಕದ ನಗರಗಳಾದ ಫರಿದಾಬಾದ್, ಗಾಜಿಯಾಬಾದ್, ಸೋನಿಪತ್, ಗುರುಗ್ರಾಮ, ನೋಯ್ಡಾದಿಂದ ಬಹಳಷ್ಟು ಜನರು ಬಂದು ಕೋವಿಡ್‌ ಲಸಿಕೆ ಪಡೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ಅಗತ್ಯವಾಕ್ಕೆಬೇಕಿರುವಷ್ಟು ಲಸಿಕೆಗಳು ಇಲ್ಲ, ಕೇಂದ್ರ ಸರಿಯಾದ ಪ್ರಮಾಣದಲ್ಲಿ ಲಸಿಕೆಗಳನ್ನು ಪೂರೈಕೆ ಮಾಡಿದರೆ ನಾವು ಮೂರು ತಿಂಗಳಲ್ಲಿಎಲ್ಲರಿಗೂ ಲಸಿಕೆ ಹಾಕಬಹುದು ಎಂದರು.

ಇಲ್ಲಿಯವರೆಗೆ 40 ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. 18-44 ವಯೋಮಾನದವರು1 ಕೋಟಿ ಜನರಿದ್ದಾರೆ. ಒಟ್ಟು 50 ಲಕ್ಷ ಜನರು 45 ವರ್ಷಕ್ಕಿಂತ ಮೇಲ್ಪಟ್ಟವರು ಇದ್ದಾರೆ. ಮೂರು ತಿಂಗಳಲ್ಲಿ ನಮಗೆ 2.5 ಕೋಟಿ ಲಸಿಕೆಗಳು ಬೇಕು. ಪ್ರತಿ ತಿಂಗಳು, 80 ರಿಂದ 85 ಲಕ್ಷ ಡೋಸ್ ಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.

ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT