ಶುಕ್ರವಾರ, ಅಕ್ಟೋಬರ್ 23, 2020
21 °C
ಕೋವಿಡ್‌: ಐಐಟಿ–ಮಂಡಿ ಸಂಶೋಧಕರಿಂದ ತುಲನಾತ್ಮಕ ಅಧ್ಯಯನ

ಕೋವಿಡ್‌: ದುಬೈ, ಬ್ರಿಟನ್‌ನಿಂದ ಬಂದವರಿಂದಲೇ ಹೆಚ್ಚು ಪ್ರಸರಣ- ಅಧ್ಯಯನ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೇರೆ ದೇಶಗಳಿಂದ ಬಂದವರಿಂದಲೇ ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಕೋವಿಡ್‌–19 ಪ್ರಸರಣವಾಗಿದೆ ಎಂದು ಐಐಟಿ–ಮಂಡಿ ಸಂಶೋಧಕರು ಕೈಗೊಂಡ ತುಲನಾತ್ಮಕ ಅಧ್ಯಯನ ಹೇಳಿದೆ.

ಅದರಲ್ಲೂ, ಬ್ರಿಟನ್‌ ಮತ್ತು ದುಬೈನಿಂದ ಬಂದವರ ಪಾಲೇ ಅಧಿಕ ಎಂದು ಈ ಅಧ್ಯಯನ ಪ್ರತಿಪಾದಿಸುತ್ತದೆ. ಅಧ್ಯಯನ ವರದಿ ‘ಜರ್ನಲ್‌ ಆಫ್‌ ಟ್ರಾವೆಲ್‌ ಮೆಡಿಸಿನ್‌‘ನಲ್ಲಿ ಪ್ರಕಟವಾಗಿದೆ.

‘ದೇಶದಲ್ಲಿ ಕಂಡುಬಂದ ಕೋವಿಡ್‌–19 ಮೊದಲ ಅಲೆ ಕುರಿತಂತೆ ಅಧ್ಯಯನ ನಡೆಸಿದಾಗ ಹಲವಾರು ಮಹತ್ವದ ಅಂಶಗಳು ಪತ್ತೆಯಾದವು’ ಎಂದು ಅಧ್ಯಯನ ತಂಡದಲ್ಲಿದ್ದ ಸಹಾಯಕ ಪ್ರಾಧ್ಯಾಪಕಿ ಸರಿತಾ ಆಜಾದ್‌ ಹೇಳಿದರು.

‘ಜನವರಿಯಿಂದ ಏಪ್ರಿಲ್‌ ವರೆಗೆ ಭಾರತಕ್ಕೆ ಬಂದವರ ಪ್ರಯಾಣದ ವಿವರಗಳನ್ನು ಸಂಗ್ರಹಿಸಲಾಯಿತು. ಅದು ಈ ಸೋಂಕು ಪ್ರಸರಣದ ಪ್ರಾರಂಭಿಕ ಹಂತ. ಸೋಂಕಿತರ ಪೈಕಿ ಹೆಚ್ಚು ಜನರು ದುಬೈ (144 ಜನ) ಹಾಗೂ ಬ್ರಿಟನ್‌ನಿಂದ (64) ಬಂದವರಾಗಿದ್ದರು’ ಎಂದೂ ಹೇಳಿದರು.

‘ತಮಿಳುನಾಡು, ದೆಹಲಿ ಹಾಗೂ ಆಂಧ್ರಪ್ರದೇಶದ ಸೋಂಕಿತರಿಂದ ಹೊರಗಿನ ಪ್ರದೇಶಗಳಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಸೋಂಕು ಹರಡಿದೆ. ಗುಜರಾತ್‌, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಜಮ್ಮು–ಕಾಶ್ಮೀರ ಹಾಗೂ ಕರ್ನಾಟಕದಲ್ಲಿನ ಸೋಂಕಿತರಿಂದ ಸ್ಥಳೀಯವಾಗಿ ಹಾಗೂ ಇತರ ರಾಜ್ಯಗಳಿಗೂ ಈ ಸೋಂಕು ಪ್ರಸರಣವಾಗಿರುವುದು ಸಹ ಅಧ್ಯಯನದಿಂದ ತಿಳಿದುಬಂದಿದ’ ಎಂದರು.

‘ಕೋವಿಡ್‌–19ನಂತಹ ಪಿಡುಗು ಕಾಣಿಸಿಕೊಂಡ ಈ ಸಂದರ್ಭದಲ್ಲಿ ಕೈಗೊಂಡಿರುವ ಸಂಶೋಧನೆಯಿಂದ ಹೊರಹೊಮ್ಮುವ ವಿವರಗಳು ಮಹತ್ವದ ದಾಖಲೆ ಎನಿಸುತ್ತವೆ. ಈ ಸಂಶೋಧನೆಯ ವಿವರಗಳ ಆಧಾರದಲ್ಲಿ ಇತರ ಯಾವುದೇ ಸಾಂಕ್ರಾಮಿಕ ರೋಗ ಹರಡುವ ಪ್ರಕ್ರಿಯೆ ಕುರಿತಂತೆ ತಿಳಿದುಕೊಳ್ಳಲು ಸಾಧ್ಯವಾಗಲಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು