ಟಿಆರ್ಪಿ ಹಗರಣ: ಬಾರ್ಕ್ ಮಾಜಿ ಸಿಒಒ ಬಂಧನ

ಮುಂಬೈ: ಟಿಆರ್ಪಿ ಹಗರಣದ ಸಂಬಂಧ ಮುಂಬೈ ಪೊಲೀಸರು ಇಂದು ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ (ಬಿಎಆರ್ಸಿ–ಬಾರ್ಕ್) ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್ ರಾಮ್ಗರ್ಹಿಯಾ ಅವರನ್ನು ಬಂಧಿಸಿದ್ದಾರೆ. ಇವರು ಹಗರಣದ ಸಂಬಂಧ ಬಂಧಿಸಲಾದ 14ನೇ ಆರೋಪಿ.
ತನಿಖೆಯಲ್ಲಿ ಹಗರಣದಲ್ಲಿ ಇವರ ಪಾತ್ರವೂ ಇರುವುದು ತಿಳಿದುಬಂದಿತ್ತು. ಹೀಗಾಗಿ, ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು. ಭಾನುವಾರ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಸಿಇಒ ವಿಕಾಸ್ ಖಾನ್ಚಂದಾನಿರನ್ನು ಬಂಧಿಸಿದ್ದು, ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.
ಕಾರ್ಯಕ್ರಮಗಳ ವೀಕ್ಷಣೆಯ ಶ್ರೇಣಿ ನಿಗದಿಪಡಿಸಲು ಆಯ್ದ ಮನೆಗಳಲ್ಲಿ ಮಾಪಕಗಳನ್ನು ಅಳವಡಿಸಲು ಬಿಎಆರ್ಸಿ ಹಂಸಾ ಸಂಸ್ಥೆಯನ್ನು ನಿಯೋಜಿಸಿತ್ತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.