ಪಂಜಾಬ್ ಗಾಯಕ ಖಾತೆಗೆ ಟ್ವಿಟರ್ ತಡೆ

ನವದೆಹಲಿ: ಪಂಜಾಬ್ ಗಾಯಕ ಜಾಝಿ ಬಿ ಮತ್ತು ಹಿಪ್-ಹಾಪ್ ಕಲಾವಿದ ಎಲ್–ಫ್ರೆಷ್ ಇಬ್ಬರ ಖಾತೆಗಳಿಗೆ ಟ್ವಿಟರ್ ನಿರ್ಬಂಧ ವಿಧಿಸಿದೆ.
ಕೇಂದ್ರ ಸರ್ಕಾರದ ಕೋರಿಕೆ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಇವರು ಟ್ವೀಟ್ ಮಾಡಿದ್ದರು.
ಜಾಝಿ ಬಿ ಸೇರಿದಂತೆ ನಾಲ್ಕು ಖಾತೆಗಳಿಗೆ ನಿರ್ಬಂಧ ವಿಧಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು.
’ಸ್ಥಳೀಯ ಕಾನೂನು ಮತ್ತು ಟ್ವಿಟರ್ ನಿಯಮಗಳನ್ನು ಪರಾಮರ್ಶಿಸಿ ಈ ಕ್ರಮಕೈಗೊಳ್ಳಲಾಗಿದೆ. ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದರೆ ವಿಷಯಗಳನ್ನು ತೆಗೆದು ಹಾಕಲಾಗುತ್ತದೆ’ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.