ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಮಹಾರಾಷ್ಟ್ರದಲ್ಲಿ ಕೌಟುಂಬಿಕ ಡಾಕ್ಟರ್‌ ಯೋಜನೆಗೆ ಚಾಲನೆ

Last Updated 9 ಮೇ 2021, 13:56 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ತಡೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ‘ಕೌಟುಂಬಿಕ ಡಾಕ್ಟರ್‌’ ಚಿಂತನೆಗೆ ಒತ್ತು ನೀಡುವ ‘ನನ್ನ ಡಾಕ್ಟರ್‌’ ಯೋಜನೆಗೆ ಚಾಲನೆ ನೀಡಿದ್ದಾರೆ.

‘ಕೌಟುಂಬಿಕ ವೈದ್ಯರ ಪಾತ್ರ ಮುಖ್ಯವಾದುದು. ಈ ವೈದ್ಯರು ತಮ್ಮ ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ಸೂಕ್ತ ಮಾರ್ಗದರ್ಶನ ಮಾಡಿದರೆ ಸೋಂಕು ಹರಡುವಿಕೆ ತಡೆಯಬಹುದು’ ಎಂದು ಮುಖ್ಯಮಂತ್ರಿ ಹೇಳಿದರು. 700ಕ್ಕೂ ಹೆಚ್ಚು ವೈದ್ಯರ ಜೊತೆಗೆ ಮುಖ್ಯಮಂತ್ರಿ ಅವರು ಆನ್‌ಲೈನ್‌ ಮೂಲಕ ಸಭೆ ನಡೆಸಿದರು.

ಕೋವಿಡ್‌ ತಡೆಗೆ ಕಳೆದ ಒಂದು ವರ್ಷದಲ್ಲಿ ಹಲವು ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ.ಇವುಗಳಲ್ಲಿ ‘ಚೇಸ್‌ ದ ವೈರಸ್‌’, ‘ನನ್ನ ಕುಟುಂಬ, ನನ್ನ ಜವಾಬ್ದಾರಿ’, ‘ನಾನೂ ಹೊಣೆಗಾರ’, ಮಿಷನ್ ಆಕ್ಸಿಜನ್‌ ಸೇರಿವೆ.

ಕುಟುಂಬದ ವೈದ್ಯರು ರೋಗಿಗಳನ್ನು ಪರಿಶೀಲಿಸಿ ರೋಗಲಕ್ಷಣಗಳು ಇವೆಯೇ, ಆಸ್ಪತ್ರೆಗೆ ದಾಖಲಾಗುವುದು ಅಗತ್ಯವೇ ಎಂದು ನಿರ್ಧರಿಸಬಹುದು. ಮನೆಯಲ್ಲಿಯೇ ಇರಿಸಿ ಆರೈಕೆ ಮಾಡಿಸಲು ಹಾಗೂ ಅನಿವಾರ್ಯವಾದರೆ ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಅಲ್ಲದೆ, ಕುಟುಂಬದ ವೈದ್ಯರು ರೋಗಿಗಳ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬುವುದು ಸಾಧ್ಯವಾಗಲಿದೆ ಎಂದರು.

‘ವೈದ್ಯರು ತಮ್ಮ ವ್ಯಾಪ್ತಿಯ ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಜಂಬೋ ಫೀಲ್ಡ್‌ ಆಸ್ಪತ್ರೆಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಹಾಗೂ ರೋಗಿಗಳ ಜೊತೆಗೆ ಸಮಾಲೋಚನೆಗೆ ಮುಂದಾಗಬೇಕು. ಚಿಕಿತ್ಸೆಯಲ್ಲಿ ಏಕರೂಪದ ಶಿಷ್ಟಾಚಾರ ಕಾಯ್ದುಕೊಳ್ಳುವುದು ಅಗತ್ಯ’ ಎಂದು ಆನ್‌ಲೈನ್ ಸಭೆಯಲ್ಲಿ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT