ಶಾಹಜಹಾಂಪುರ (ಉತ್ತರ ಪ್ರದೇಶ): ಗರ್ಭಿಣಿಯಾಗಿದ್ದ 14 ವರ್ಷದ ದಲಿತ ಬಾಲಕಿಯನ್ನು ತಂದೆ ಮತ್ತು ಆಕೆಯ ಸಹೋದರನೇ ಹತ್ಯೆಗೈದಿರುವ ಕೃತ್ಯ ಸಿದೌಲಿ ಪಟ್ಟಣ ಸಮೀಪದ ದುಲ್ಹಾಪುರ ಗ್ರಾಮದಲ್ಲಿ ನಡೆದಿದೆ.

ಮಗುವಿನ ತಂದೆ ಯಾರು ಎನ್ನುವುದನ್ನು ಹೇಳಲು ಬಾಲಕಿ ನಿರಾಕರಿಸಿದ್ದಕ್ಕೆ ಈ ಇಬ್ಬರು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುಲ್ಹಾಪುರ ಗ್ರಾಮದಲ್ಲಿ ರುಂಡವಿಲ್ಲದ ಬಾಲಕಿಯ ಶವ ಮಂಗಳವಾರ ಪತ್ತೆಯಾದ ಬಳಿಕ ಈ ಪ್ರಕರಣ ಗೊತ್ತಾಗಿದೆ.

‘ಬಾಲಕಿ ಗರ್ಭಿಣಿಯಾಗಿ ಆರು ತಿಂಗಳಾಗಿದ್ದವು. ಮೇಲ್ನೋಟಕ್ಕೆ ಇದು ಮರ್ಯಾದೆಗೇಡಿ ಹತ್ಯೆ ಎನ್ನುವುದು ಕಂಡು ಬಂದಿದೆ. ಬಾಲಕಿಯ ತಂದೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ತಿಳಿಸಿದ್ದಾರೆ.

'ಸೆಪ್ಟೆಂಬರ್ 24ರಂದೇ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆದರೆ, ಕುಟುಂಬದವರು ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸಂಬಂಧ ಹೊಂದಿದ್ದ ವ್ಯಕ್ತಿಯ ಜತೆಗೆ ಮದುವೆ ಮಾಡಿಸಲು ಬಯಸಿದ್ದೆ ಎಂದು ಬಾಲಕಿಯ ತಂದೆ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.

ಕೊಲೆ ಮಾಡಿದ ನಂತರ ಬಾಲಕಿಯ ಸಹೋದರ ಪರಾರಿಯಾಗಿದ್ದಾನೆ. ಬಾಲಕಿಯ ತಂದೆಯನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.