ಸೋಮವಾರ, ಜುಲೈ 4, 2022
21 °C

5 ರಾಜ್ಯಗಳ ವಿಧಾನಸಭೆ ಚುನಾವಣೆ: ಫೆ. 10ರಿಂದ ಮತಗಟ್ಟೆ ಸಮೀಕ್ಷೆ ನಿಷೇಧ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಫೆಬ್ರವರಿ 10 ಮತ್ತು ಮಾರ್ಚ್ 7ರ ನಡುವೆ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುವುದು ಮತ್ತು ಪ್ರಕಟಿಸುವುದನ್ನು ಭಾರತೀಯ ಚುನಾವಣಾ ಆಯೋಗ ನಿಷೇಧಿಸಿ ಶನಿವಾರ ಆದೇಶಿಸಿದೆ.

‘ಫೆಬ್ರುವರಿ 10ರ ಬೆಳಿಗ್ಗೆ 7ರಿಂದ, ಮಾರ್ಚ್ 7 ರ ಸಂಜೆ 6.30 ರ ನಡುವಿನ ಅವಧಿಯಲ್ಲಿ ಮತಗಟ್ಟೆ ಸಮೀಕ್ಷೆಯನ್ನು ನಡೆಸುವ ಮತ್ತು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದ ಮೂಲಕ ಪ್ರಕಟಿಸುವ ಅಥವಾ ಪ್ರಚಾರ ಮಾಡುವುದುನ್ನು ನಿಷೇಧಿಸಲಾಗಿದೆ’ ಎಂದು ಆಯೋಗ ತಿಳಿಸಿದೆ.

‘ಚುನಾವಣೆಗೆ ಸಂಬಂಧಿಸಿದ ವಿಷಯಗಳು, ಅಭಿಪ್ರಾಯ ಸಂಗ್ರಹ, ಸಮೀಕ್ಷೆಯನ್ನು ಮತದಾನ ನಡೆಯುವ 48 ಗಂಟೆಗಳ ಮೊದಲೇ ನಿಷೇದಿಸಲಾಗುವುದು,’ ಎಂದು ಆಯೋಗ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು