ಗುರುವಾರ , ಮಾರ್ಚ್ 23, 2023
22 °C

ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಮೋಸದ ಜಾಲ: ಮಹಿಳೆಗೆ ₹3 ಲಕ್ಷ ವಂಚನೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಲಖನೌ: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಸಲುಗೆ ಬೆಳೆಸಿಕೊಂಡು ₹3 ಲಕ್ಷ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2021 ರ ಅಕ್ಟೋಬರ್‌ನಲ್ಲಿ ವೆಬ್‌ಸೈಟ್ ಒಂದರ ಮೂಲಕ ಆರೋಪಿ ವಾರಾಣಸಿಯ ನಂದ್ ಲಾಲ್ ಯಾದವ್ ಅವರನ್ನು ಭೇಟಿಯಾಗಿದ್ದಾಗಿ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ನಂದಲಾಲ್ ಮಹಿಳೆಯೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದ. ಆಕೆಯನ್ನು ಮದುವೆಯಾಗಲು ಪ್ರಸ್ತಾಪಿಸಿದ್ದ ಮತ್ತು ಮಹಿಳೆ ಮನೆಯವರು ಕೂಡ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರು.

ಆರೋಪಿ ಸಂತ್ರಸ್ತೆ ಜತೆ ಉತ್ತಮ ಸಂಪರ್ಕ ಇಟ್ಟುಕೊಂಡು, ಆಕೆಯ ನಂಬಿಕೆ ಗಳಿಸಿದ್ದ. ಬಳಿಕ ತನ್ನ ಸ್ನೇಹಿತನಿಗೆ ತುರ್ತು ಅಗತ್ಯವಿದೆಯೆಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದನ್ನು ನಂಬಿದ ಮಹಿಳೆ  ಆರೋಪಿ ನೀಡಿದ ಬ್ಯಾಂಕ್ ಖಾತೆ ಸಂಖ್ಯೆಗೆ ಹಣ ವರ್ಗಾಯಿಸಿದ್ದಾರೆ.  ಸಂತ್ರಸ್ತೆ ಹಣ ವರ್ಗಾವಣೆ ಮಾಡಿದ ಬಳಿಕ ಆರೋಪಿ ನಾಪತ್ತೆಯಾಗಿದ್ದಾನೆ. 

‘ಹಣ ನೀಡಿದ ಬಳಿಕ ಆರೋಪಿ ಫೋನ್ ಕರೆಗೆ ಸಿಗುತ್ತಿಲ್ಲ. ಇದೊಂದು ದುಷ್ಕರ್ಮಿಗಳ ಸಂಘಟಿತ ಗ್ಯಾಂಗ್ ಎಂದು ತೋರುತ್ತಿದೆ. ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಮದುವೆಯಾಗುವುದಾಗಿ ಹುಡುಗಿಯರನ್ನು ಬಲೆಗೆ ಬೀಳಿಸಿ ವಂಚಿಸುತ್ತಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು