ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಮಹಿಳೆ, ನಾನು ಹೋರಾಡಬಲ್ಲೆʼ: ಕಾಂಗ್ರೆಸ್‌ ಪುನಶ್ಚೇತನಕ್ಕೆ ಪ್ರಿಯಾಂಕಾ ಯತ್ನ

Last Updated 5 ನವೆಂಬರ್ 2021, 9:37 IST
ಅಕ್ಷರ ಗಾತ್ರ

ಲಖನೌ:ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇತ್ತೀಚೆಗೆ ನಡೆದ ರ‍್ಯಾಲಿಯೊಂದರಲ್ಲಿ, ʼನಾನು ಮಹಿಳೆ, ನಾನು ಹೋರಾಡಬಲ್ಲೆʼ ಎಂದು ಹೇಳಿಕೆ ನೀಡಿದ್ದಾರೆ.ಪ್ರಿಯಾಂಕಾರ ಈ ಘೋಷಣೆಯು ಪುನಶ್ಚೇತನದ ಪ್ರಯತ್ನದಲ್ಲಿರುವ ಪಕ್ಷದತ್ತ ಮಹಿಳಾ ಮತದಾರರನ್ನು ಸೆಳೆಯುವನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.

ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

ದಶಕದ ಕಾಲದಿಂದಲೂ ಭಾರತದ ರಾಜಕೀಯದಲ್ಲಿಪ್ರಾಬಲ್ಯ ಸಾಧಿಸಿರುವ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ2024ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷವು ಸವಾಲು ನೀಡಬಲ್ಲದೇ ಎಂಬ ಸುಳಿವನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶನೀಡಲಿದೆ.

ಆರ್ಥಿಕ ಅಭಿವೃದ್ಧಿ, ಸದೃಢ- ನವಭಾರತ ನಿರ್ಮಾಣದ ಭರವಸೆಯೊಂದಿಗೆ2014ರಲ್ಲಿ ಅಧಿಕಾರಕ್ಕೇರಿದ ಮೋದಿ,2019ರ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರು.

136 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್‌ ಪಕ್ಷವುನಾಯಕತ್ವದಲ್ಲಿನ ವೈಫಲ್ಯದಿಂದಾಗಿ ಹಿನ್ನಡೆ ಅನುಭವಿಸಿದೆ. ಹೀಗಾಗಿಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಹಾದಿ ಸುಗಮವಾಯಿತು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿಫಲವಾದ ಕಾರಣ ರಾಹುಲ್‌ ಗಾಂಧಿ ಪಕ್ಷದ ನಾಯಕತ್ವ ತೊರೆದಿದ್ದರು. ಬಳಿಕಸೋನಿಯಾ ಗಾಂಧಿಯವರೇ ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡಿದ್ದಾರೆ. ಆದಾಗ್ಯೂಅವರ ನಾಯಕತ್ವದ ಶೈಲಿಯನ್ನು ಟೀಕಿಸುವವರುಪಕ್ಷದಲ್ಲಿ ಸಾಕಷ್ಟು ಜನರಿದ್ದಾರೆ.

2019ರಲ್ಲಿ ರಾಜಕೀಯ ಪ್ರವೇಶಿಸಿದ ಪ್ರಿಯಾಂಕಾ, ಮಹಿಳಾ ನಾಯಕತ್ವಕ್ಕೆ ಮನ್ನಣೆ ತಂದುಕೊಡುವ ಜೊತೆಗೆ ಕಾಂಗ್ರೆಸ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಬಿಜೆಪಿಯಹಿಂದೂ ಅಜೆಂಡಾಕ್ಕೆ ಪರ್ಯಾಯವಾಗಿ, ಕಾಂಗ್ರೆಸ್‌ ತನ್ನ ಜಾತ್ಯತೀತ ಪರಂಪರೆಯೊಂದಿಗೆ, ಎಲ್ಲರನ್ನೂ ಒಳಗೊಳ್ಳುವರಾಷ್ಟ್ರೀಯ ಪಕ್ಷವೆಂಬಂತೆ ಉತ್ತರ ಪ್ರದೇಶದಲ್ಲಿ ಬಿಂಬಿತವಾಗುತ್ತಿದೆ.

ದೇಶದಾದ್ಯಂತ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದರ ವಿರುದ್ಧ ಮಹಿಳೆಯರು ಜಾಗೃತರಾಗಿದ್ದು, ಪ್ರಿಯಾಂಕಾ ಮಹಿಳೆಯರಿಗೆ ಬದಲಾವಣೆಯ ಭರವಸೆ ನೀಡುತ್ತಿದ್ದಾರೆ.

ಕೋವಿಡ್-‌19ನಿರ್ವಹಣೆ ಮತ್ತುಮಹಿಳೆಯರ ಮೇಲಿನ ದೌರ್ಜನ್ಯ ತಡೆ ವಿಚಾರದಲ್ಲಿ ಉತ್ತರ ಪ್ರದೇಶಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿವೆ. ಹಾಗೆಯೇ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನೂ ಸರ್ಕಾರ ಎದುರಿಸುತ್ತಿದೆ.

ಇದೇವೇಳೆಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭದ್ರಕೋಟೆಯಾಗಿರುವಗೋರಖಪುರದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ,ʼನಾನು ಮತ್ತು ಕಾಂಗ್ರೆಸ್‌ ಪಕ್ಷವು ನಿಮಗಾಗಿ ಹೋರಾಟ ನಡೆಸಲಿದ್ದೇವೆ ಎಂದು ಮಹಿಳೆಯರಿಗೆ ಹೇಳಲು ಬಯಸುತ್ತೇನೆʼ ಎಂದು ಘೋಷಿಸಿದ್ದಾರೆ.

ಈ ರ‍್ಯಾಲಿಯಲ್ಲಿ ಅಂದಾಜು40,000 ಜನರು ಭಾಗವಹಿಸಿದ್ದರು. ಅದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರಿದ್ದರುಎನ್ನಲಾಗಿದೆ.

ʼಜನರು, ಮುಖ್ಯವಾಗಿ ಮಹಿಳೆಯರು ಭರವಸೆಗಳೊಂದಿಗೆ ಕಾಂಗ್ರೆಸ್‌ನತ್ತ ನೋಡಲಾರಂಭಿಸಿದ್ದಾರೆ. ನಮ್ಮ ಪಕ್ಷವು ಮಹಿಳೆಯರೊಂದಿಗೆ ಮತ್ತು ಅವರ ಧ್ವನಿಯಾಗಿ ನಿಲ್ಲಲಿದೆʼ ಎಂದು ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತೆ ಸುನಿತಾ ಮಿಶ್ರಾ ಎನ್ನುವವರು ಹೇಳಿದ್ದಾರೆ.

ರಾಜ್ಯದ403ಕ್ಷೇತ್ರಗಳ ಪೈಕಿ ಶೇ.40 ರಷ್ಟು ಸ್ಥಾನಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕಾಂಗ್ರೆಸ್‌ ನೀಡಿರುವ ವಾಗ್ದಾನವನ್ನೂಮತದಾರರು ಸ್ವಾಗತಿಸಿದ್ದಾರೆ ಎಂದೂಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋರಖಪುರ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷೆ ನಿರ್ಮಲಾ ಪಾಸ್ವಾನ್‌, ʼಪಕ್ಷಕ್ಕೆ ಸೇರಿಕೊಳ್ಳಲು ಸಾಕಷ್ಟು ಮಹಿಳೆಯರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಮಹಿಳೆಯರು ಬದಲಾವಣೆಯನ್ನು ತರಲಿದ್ದಾರೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಮತ್ತು ಸ್ಮಾರ್ಟ್‌ಫೋನ್‌ ವಿತರಣೆ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಕುಟುಂಬವೊಂದಕ್ಕೆ ವಾರ್ಷಿಕ ಮೂರು ಅಡುಗೆ ಅನಿಲ ಸಿಲಿಂಡರ್‌ಗಳ ಉಚಿತ ವಿತರಣೆ, ಉದ್ಯೋಗದಲ್ಲಿ ಲಿಂಗಾಧಾರಿತ ಮೀಸಲಾತಿ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್‌ ನೀಡಿದೆ.

ಆದಾಗ್ಯೂ ನಾಯಕತ್ವದ ಬಿಕ್ಕಟ್ಟು ಸೇರಿದಂತೆ ಸಾಕಷ್ಟು ಆಂತರಿಕ ಸಮಸ್ಯೆಗಳನ್ನುಕಾಂಗ್ರೆಸ್ ಎದುರಿಸುತ್ತಿದೆ.

ರಾಜ್ಯ ನಾಯಕರು ಕೇವಲಹೊಗಳುಭಟ್ಟರ ಮಾತುಗಳನ್ನಷ್ಟೇ ಕೇಳುತ್ತಿದ್ದಾರೆ. ಪಕ್ಷದಲ್ಲಿ ಇಂತಹವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಎಂಬಂತೆ ಹೆಚ್ಚಾಗಿದೆʼ ಎಂದು ಇತ್ತೀಚೆಗೆ ಕಾಂಗ್ರೆಸ್‌ ತೊರೆದ ಗೋರಖಪುರ ವಿಧಾನಸಭೆಕ್ಷೇತ್ರದ ಮಾಜಿ ಅಭ್ಯರ್ಥಿ ರಾಣಾ ರಾಹುಲ್‌ ಸಿಂಗ್‌ ಆರೋಪಿಸಿದ್ದರು.

ʼತಳಮಟ್ಟದಿಂದ ಶ್ರಮಿಸಿದ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆʼ ಎಂದೂ ದೂರಿದ್ದರು.

ಈ ಬಗ್ಗೆ ಪ್ರಿಯಾಂಕಾ ವಾದ್ರಾ ನಿಕಟವರ್ತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಸಂಘಟನಾ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ʼಬದಲಾವಣೆ ಸುಲಭವಲ್ಲ. ಆದರೆ, ಬದಲಾವಣೆ ಒಳ್ಳೆಯದು. ಈ ಬದಲಾವಣೆಗಳು ದೀರ್ಘಾವಧಿವರೆಗೆ ಕೆಲಸ ಮಾಡಲಿವೆʼ ಎಂದುಸುಪ್ರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಕೇವಲ 4-7 ಸ್ಥಾನ: ಸಿ-ವೋಟರ್‌
ಸಿ-ವೋಟರ್‌ ಇತ್ತೀಚೆಗೆ ನಡೆಸಿದ ಸಮೀಕ್ಷೆಪ್ರಕಾರ, ರಾಜ್ಯದ403 ಸ್ಥಾನಗಳಲ್ಲಿ240ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿಯು ಸುಲಭವಾಗಿ ಜಯಿಸಲಿದೆ. ಕಾಂಗ್ರೆಸ್‌ ಮೂರರಿಂದ ಏಳು ಸ್ಥಾನಗಳನ್ನಷ್ಟೇ ಗೆಲ್ಲಬಹುದು. ಇದರೊಂದಿಗೆ ಜಯಗಳಿಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ ಎನ್ನಲಾಗಿದೆ.

2017ರ ಚುನಾವಣೆಯಲ್ಲಿ114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಕೇವಲ7 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ312 ಸ್ಥಾನಗಳನ್ನು ಜಯಿಸಿ ಅಧಿಕಾರಕ್ಕೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT