ಉತ್ತರಾಖಂಡ: ಮೇ.18ರಂದು ಬದರಿನಾಥ ದೇವಾಲಯ ಪುನರಾರಂಭ

ಡೆಹ್ರಾಡೂನ್: ಚಳಿಗಾಲದ ವಿರಾಮದ ಬಳಿಕ ಬದರಿನಾಥ ದೇವಾಲಯದ ದ್ವಾರಗಳನ್ನು ಮೇ 18ರಂದು ಭಕ್ತಾಧಿಗಳಿಗಾಗಿ ತೆರೆಯಲಾಗುವುದು.
‘ಉತ್ತರಾಖಂಡ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯವು ಚಳಿಗಾಲದ ವಿರಾಮದಿಂದಾಗಿ ಮುಚ್ಚಲ್ಪಟ್ಟಿತ್ತು. ಭಕ್ತರಿಗಾಗಿ ಮೇ 18 ರಂದು ಬೆಳಿಗ್ಗೆ 4.15 ಕ್ಕೆ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು’ ಎಂದು ಚಾರ್ಧಾಮ್ ದೇವಸ್ಥಾನಂ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಮಂಗಳವಾರ ತೆಹ್ರಿ ಮಹಾರಾಜರ ನರೇಂದ್ರ ಅರಮನೆಯಲ್ಲಿ ವಸಂತ ಪಂಚಮಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ’ ಎಂದು ಅವರು ಹೇಳಿದರು.
ಕಳೆದ ವರ್ಷ ಕೊರೊನಾ ಸೋಂಕಿನ ಕಾರಣ ದೇವಸ್ಥಾನವನ್ನು ಪುನಃ ತೆರೆಯುವುದು ಇನ್ನಷ್ಟು ವಿಳಂಬವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.