ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2013 ಕೇದಾರನಾಥ ಪ್ರವಾಹ: ನಾಪತ್ತೆಯಾದವರನ್ನು ಪತ್ತೆ ಹಚ್ಚಲು ಪೊಲೀಸ್ ಕಾರ್ಯಾಚರಣೆ

Last Updated 16 ಸೆಪ್ಟೆಂಬರ್ 2020, 13:41 IST
ಅಕ್ಷರ ಗಾತ್ರ

ಡೆಹ್ರಾಡೂನ್: 2013 ಜೂನ್ ತಿಂಗಳಲ್ಲಿ ಕೇದಾರನಾಥದಲ್ಲಿ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಇದಕ್ಕಾಗಿಉತ್ತರಾಖಂಡ ಪೊಲೀಸರು ಬುಧವಾರ 10 ತಂಡಗಳನ್ನು ನಿಯೋಜನೆ ಮಾಡಿದ್ದಾರೆ.

ಕೇದಾರನಾಥ ದೇಗುಲದ ಸುತ್ತಲಿನ ಪ್ರದೇಶಗಳಲ್ಲಿ 10 ದಿನಗಳ ಕಾಲ ಈ ತಂಡ ಶೋಧ ಕಾರ್ಯಾಚರಣೆ ನಡೆಸಲಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಪೊಲೀಸ್ ಸಬ್‍‌ಇನ್ಸ್‌ಪೆಕ್ಟರ್ ನೇತೃತ್ವದ ಪ್ರತಿ ತಂಡದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, ಇಬ್ಬರು ಎಸ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ. ರುದ್ರಪ್ರಯಾಗ್ ಎಸ್‌ಪಿ ನವನೀತ್ ಸಿಂಗ್ ಅವರ ಸೂಚನೆಯಂತೆ ಗೌರಿಕುಂಡ್‌ನಿಂದ ವಿವಿಧ ಭಾಗಗಳಲ್ಲಿ ಮತ್ತು ಸೋನ್‌ಪ್ರಯಾಗ್ ಪ್ರದೇಶದಲ್ಲಿ ಹುಡುಕಾಟ ನಡೆಯಲಿದೆ.

ಹುಡುಕಾಟ ನಡೆಸುವ ವೇಳೆ ನಾಪತ್ತೆಯಾದವರ ಯಾವುದೇ ಕುರುಹು ಸಿಕ್ಕಿದರೆ ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿಯೇ ಡಿಎನ್ಎ ಮಾದರಿ ಸಂಗ್ರಹಿಸಲಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

ಉತ್ತರಾಖಂಡ ಹೈಕೋರ್ಟ್ ಆದೇಶದ ಪ್ರಕಾರ ಈ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT