ನವದೆಹಲಿ:ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ.ಮುರಳೀಧರನ್ ಅವರು ಸಿರಿಯಾದ ವಿದೇಶಾಂಗ ಸಚಿವರೊಂದಿಗೆ ಗುರುವಾರ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸಿರಿಯಾದ ರಾಷ್ಟ್ರೀಯ ಪುನರ್ನಿರ್ಮಾಣ ಪ್ರಯತ್ನಗಳನ್ನು ಭಾರತ ಬೆಂಬಲಿಸಲಿದೆ ಎಂದು ಭರವಸೆ ನೀಡಿದ್ದಾರೆ.

‘ಭಾರತ-ಸಿರಿಯಾ ಸಚಿವರ ಸಮಾಲೋಚನೆ ವೇಳೆಸಿರಿಯಾದ ಉಪ ವಿದೇಶಾಂಗ ಸಚಿವ ಎಚ್ಇ ಫೇಸಲ್ ಮೆಕ್ಡಾಡ್ ಅವರೊಂದಿಗೆ ಇಂದು ಸಂಜೆ ಅತ್ಯುತ್ತಮವಾದ ಚರ್ಚೆ ನಡೆಯಿತು. ಭಾರತ ಮತ್ತು ಭಾರತದ ಜನರ ಬಗ್ಗೆ ಆತ್ಮೀಯ ಭಾವನೆಗಳನ್ನು ಹೊಂದಿರುವ ಅವರಿಗೆ ಧನ್ಯವಾದಗಳು’ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ.

‘ಸಿರಿಯಾದ ಪೀಪಲ್ಸ್ ಅಸೆಂಬ್ಲಿ ಚುನಾವಣೆಯ ಯಶಸ್ಸಿಗೆ ಅಭಿನಂದನೆಗಳು ಮತ್ತು ಅಲ್ಲಿನ ರಾಷ್ಟ್ರೀಯ ಪುನರ್ನಿರ್ಮಾಣ ಪ್ರಯತ್ನಗಳಿಗೆ ಭಾರತದ ಬೆಂಬಲವಿರಲಿದೆ ಎಂದು ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.

ಸಭೆ ವೇಳೆ ದ್ವಿಪಕ್ಷೀಯ ಅಭಿವೃದ್ಧಿ ಯೋಜನೆಗಳನ್ನು ಚುರುಕುಗೊಳಿಸುವ, ಸಹಕಾರ ವೃದ್ಧಿಗಾಗಿಉಭಯ ದೇಶಗಳ ಸಾಮರ್ಥ್ಯ ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಕೋವಿಡ್–19 ವಿರುದ್ಧದ ಹೋರಾಟವೂ ಸೇರಿದಂತೆ ಸಿರಿಯಾಕ್ಕೆ ಭಾರತವು ಮಾನವೀಯ ನೆರವು ವಿಸ್ತರಿಸಲಿದೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.