ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕೊರತೆ: ಆಂಧ್ರದಲ್ಲಿ ನಿಧಾನವಾಗಲಿದೆ ಕೋವಿಡ್-‌19 ಲಸಿಕೆ ಅಭಿಯಾನ

Last Updated 8 ಏಪ್ರಿಲ್ 2021, 12:45 IST
ಅಕ್ಷರ ಗಾತ್ರ

ಅಮರಾವತಿ: ಕೋವಿಡ್-‌19 ಲಸಿಕೆ ಕೊರತೆಯಿಂದಾಗಿ ಅಂಧ್ರಪ್ರದೇಶದ ನೆಲ್ಲೋರ್‌ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಕುಂಟುತ್ತಾ ಸಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಮಾಹಿತಿಯನ್ನುಆಂಧ್ರದ ಆರೋಗ್ಯ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ʼಸದ್ಯ ರಾಜ್ಯದಲ್ಲಿ3,7 ಲಕ್ಷ ಡೋಸ್‌ ಲಸಿಕೆ ಇದೆ. ಪ್ರತಿದಿನ ರಾಜ್ಯದಲ್ಲಿ1.3 ಲಕ್ಷ ಡೋಸ್‌ ಲಸಿಕೆ ಹಾಕಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಲಸಿಕೆ ಕೊರತೆ ಎದುರಾಗಲಿದೆʼ ಎಂದು ಅವರು ಹೇಳಿದ್ದಾರೆ.

ಅನಂತಪುರ ಮತ್ತು ಗುಂಟೂರ್‌ ಜಿಲ್ಲೆಗಳಲ್ಲಿಯೂ ಲಸಿಕೆ ಕೊರತೆ ಇದೆ ಎಂದು ವರದಿಗಳಾಗಿದ್ದವು. ಆದರೆ ಸರ್ಕಾರದ ಅಧಿಕಾರಿಗಳು ಈ ವರಿದಿಗಳನ್ನು ಖಚಿತ ಪಡಿಸಿಲ್ಲ.

ಆಂಧ್ರ ಸರ್ಕಾರವು ಏಪ್ರಿಲ್‌ನಲ್ಲಿ1 ಕೋಟಿ ಡೋಸ್‌ನಷ್ಟು ಲಸಿಕೆ ರವಾನಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮಾರ್ಚ್‌ 26 ರಂದು ಪತ್ರ ಬರೆದಿತ್ತು. ರಾಜ್ಯದಲ್ಲಿ ಪ್ರತಿನಿತ್ಯ5 ಲಕ್ಷ ಜನರಿಗೆ ಲಸಿಕೆ ವಿತರಿಸಲು ಯೋಜಿಸಲಾಗುತ್ತಿದೆ ಎಂದೂ ಪತ್ರದಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT