ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಷಸ್‌, ಸೇಶೆಲ್ಸ್‌ಗೆ ಭಾರತದಿಂದ 'ಕೋವಿಶೀಲ್ಡ್‌' ಲಸಿಕೆ ರವಾನೆ

Last Updated 22 ಜನವರಿ 2021, 8:48 IST
ಅಕ್ಷರ ಗಾತ್ರ

ಮುಂಬೈ: ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಿಸಲಾಗಿರುವ 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯನ್ನು ಮಾರಿಷಸ್‌ ಹಾಗೂ ಸೇಶೆಲ್ಸ್‌ ರಾಷ್ಟ್ರಗಳಿಗೆ ಕೇಂದ್ರ ಸರ್ಕಾರ ರವಾನಿಸಿದೆ. ಲಸಿಕೆ ಮೈತ್ರಿಯ ಭಾಗವಾಗಿ ನೆರೆಯ ಆರು ರಾಷ್ಟ್ರಗಳಿಗೆ ಭಾರತ ಸರ್ಕಾರ ಕೋವಿಡ್‌–19 ಲಸಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಸೀರಂ ಇನ್‌ಸ್ಟಿಟ್ಯೂಟ್‌ನಿಂದ ರವಾನೆಯಾಗುತ್ತಿರುವ ಚಿತ್ರಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾತ್ಸವ ಶುಕ್ರವಾರ ಪ್ರಕಟಿಸಿದ್ದಾರೆ.

ಭೂತಾನ್‌, ಮಾಲ್ಡೀವ್ಸ್‌, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌ ಹಾಗೂ ಸೇಶೆಲ್ಸ್‌ಗೆ ಬುಧವಾರದಿಂದ ಲಸಿಕೆ ವಿತರಣೆಯನ್ನು ಭಾರತ ಆರಂಭಿಸಿದೆ. ಚೀನಾ ಮತ್ತು ಪಾಕಿಸ್ತಾನ ಹೊರತು ಪಡಿಸಿ ನೆರೆಯ ಎಲ್ಲ ರಾಷ್ಟ್ರಗಳಿಗೆ ಭಾರತ ಲಸಿಕೆ ಪೂರೈಕೆ ಸಹಕಾರ ನೀಡುತ್ತಿದೆ. ಚೀನಾ ಮತ್ತು ಪಾಕಿಸ್ತಾನದಿಂದ ಸಹಕಾರ ಕೋರಿ ಮನವಿ ಬಂದಿಲ್ಲ ಎಂದು ವರದಿಯಾಗಿದೆ.

ಭಾರತೀಯ ನೌಕಾಪಡೆಯ ಪಿ–8ಐ ವಿಮಾನದ ಮೂಲಕ ಲಸಿಕೆ ಕಳುಹಿಸಲಾಗಿದ್ದು, ಮಾರಿಷಸ್‌ಗೆ 1 ಲಕ್ಷ ಡೋಸ್‌ಗಳಷ್ಟು ಕೋವಿಡ್‌ –19 ಲಸಿಕೆ ಹಾಗೂ ಸೇಶೆಲ್ಸ್‌ಗೆ 50,000 ಡೋಸ್‌ಗಳಷ್ಟು ಲಸಿಕೆ ಪೂರೈಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT