ಕನಿಷ್ಠ ಭದ್ರತೆ, ಸಂಚಾರ ನಿರ್ಬಂಧವಿಲ್ಲದೇ ಪ್ರಧಾನಿ ಪ್ರಯಾಣ: ವಿಡಿಯೊ ವೈರಲ್

ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರನ್ನು ಭೇಟಿಯಾಗಲೆಂದು ಜಮ್ಮು ಕಾಶ್ಮೀರಕ್ಕೆ ತೆರಳುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಕನಿಷ್ಠ ಭದ್ರತೆ, ಸಂಚಾರ ನಿರ್ಬಂಧವಿಲ್ಲದೇ ಪ್ರಯಾಣಿಸಿದ್ದಾರೆ.
ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದತ್ತ ಹೊರಟ ಪ್ರಧಾನಿ, ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುವಾಗ ಸಂಚಾರ ನಿರ್ಬಂಧವಿಲ್ಲದೇ ಬೆಂಗಾವಲು ವಾಹನಗಳೊಂದಿಗೆ ಪ‍್ರಯಾಣಿಸಿದ್ದಾರೆ. ಪ್ರಧಾನಿ ಪ್ರಾಯಾಣಿಸುವಾಗ ರಿಕ್ಷಾಗಳು, ಸಾರ್ವಜನಿಕರೂ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಕೆಲವರು ವಿಡಿಯೊ ಮಾಡಿದ್ದಾರೆ. ಅದನ್ನು ಸುದ್ದಿ ಸಂಸ್ಥೆ ಎನ್‌ಎನ್‌ಐ ಗುರುವಾರ ಪ್ರಕಟಿಸಿದೆ.
#WATCH Early morning today, when PM Modi left for Nowshera, J&K, minimal security arrangements and no traffic restrictions were in place on the route in Delhi
(Source: Doordarshan) pic.twitter.com/QJ3DrRtmyy
— ANI (@ANI) November 4, 2021
ವಿಶೇಷ ಭದ್ರತಾ ಪಡೆ (ಎಸ್‌ಪಿಜಿ)ಯಂಥ ಉನ್ನತ ಮಟ್ಟದ ಭದ್ರತೆಯನ್ನು ಭಾರತದ ಪ್ರಧಾನಿಗೆ ಒದಗಿಸಲಾಗುತ್ತದೆ.
ಇಂದು ಮುಂಜಾನೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ, ಅಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ‘ನಾನು ಇಲ್ಲಿ ಪ್ರಧಾನಿಯಾಗಿ ಬಂದಿಲ್ಲ. ನಿಮ್ಮ ಕುಟುಂಬದ ಸದಸ್ಯನಾಗಿ ದೀಪಾವಳಿ ಆಚರಿಸಲು ಬಂದಿದ್ದೇನೆ’ ಎಂದು ಪ್ರಧಾನಿ ಮೋದಿ ಸೇನಾ ಸಿಬ್ಬಂದಿಗೆ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.