ನವದೆಹಲಿ: ದೆಹಲಿಯಲ್ಲಿ ಮಂಗಳವಾರ ನಡೆದ ರೈತರ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಹಲವು ವಿಂಟೇಜ್ ಟ್ರ್ಯಾಕ್ಟರ್‌ಗಳು ಗಮನ ಸೆಳೆದವು. 50-60 ವರ್ಷದಷ್ಟು ಹಳೆಯ ಟ್ರ್ಯಾಕ್ಟರ್‌ಗಳು ಹೊಸ ಟ್ರ್ಯಾಕ್ಟರ್‌ಗಳ ಸಮಕ್ಕೂ ಪರೇಡ್ ನಡೆಸಿದವು.

ಭವಜೀತ್ ಸಿಂಗ್ ಎಂಬುವವರು ಸೋವಿಯತ್ ರಷ್ಯಾ ಕಾಲದ ಟ್ರ್ಯಾಕ್ಟರ್ ಅನ್ನು ಪರೇಡ್‌ನಲ್ಲಿ ಚಲಾಯಿಸಿದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಐಟಿ ಉದ್ಯೋಗಿ ಆಗಿರುವ ಭವಜೀತ್ ಅವರು, ಈಗ ರಜೆ ಮೇಲೆ ಭಾರತಕ್ಕೆ ಬಂದಿದ್ದಾರೆ. ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಭವಜೀತ್ ಅವರು 1968ರಲ್ಲಿ ಸೋವಿಯತ್ ರಷ್ಯಾದಲ್ಲಿ ತಯಾರಾದ ಡಿಟಿ-14 ಎಂಬ ಟ್ರ್ಯಾಕ್ಟರ್ ಅನ್ನು ಚಲಾಯಿಸಿದರು. ಪರೇಡ್‌ನಲ್ಲಿ ಭಾಗಿಯಾದ ಅತ್ಯಂತ ಹಳೆಯ ಟ್ರ್ಯಾಕ್ಟರ್‌ಗಳಲ್ಲಿ ಇದೂ ಒಂದು.

‘ನಮ್ಮ ಕುಟುಂಬ ಈ ಟ್ರ್ಯಾಕ್ಟರ್ ಅನ್ನು 25 ವರ್ಷಗಳಿಂದ ಬಳಸುತ್ತಿದೆ. ಸ್ಟೀರಿಂಗ್ ವ್ಹೀಲ್ ಹೊರತುಪಡಿಸಿ, ಉಳಿದೆಲ್ಲಾ ಮೂಲ ಬಿಡಿಭಾಗಗಳು ಹಾಗೆಯೇ ಇವೆ’ ಎಂದು ಅವರು ಮಾಹಿತಿ ನೀಡಿದರು.

ಅಮರಿಂದರ್ ಸಿಂಗ್ ಅವರ ಮಹೀಂದ್ರಾ ಬಿ-275 ಟ್ರ್ಯಾಕ್ಟರ್ 40 ವರ್ಷಕ್ಕೂ ಹಳೆಯದ್ದು. ‘ನಾನು ಹುಟ್ಟಿದಾಗ, 1978ರಲ್ಲಿ ನನ್ನ ತಂದೆ ಇದನ್ನು ಖರೀದಿಸಿದ್ದರು. ನಮ್ಮ ಊರಿನ ಎಲ್ಲರೂ ಒಂದಲ್ಲಾ ಒಂದು ಸಲ ಈ ಟ್ರ್ಯಾಕ್ಟರ್ ಅನ್ನು ಚಲಾಯಿಸಿದ್ದಾರೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್‌ನ ಬಣ್ಣ ಮಾಸಿದ್ದು ಬಿಟ್ಟರೆ, ಉಳಿದೆಲ್ಲಾ ಬಿಡಿಭಾಗಗಳು ಉತ್ತಮ ಸ್ಥಿತಿಯಲ್ಲಿವೆ.

1964ರಲ್ಲಿ ಮಾರುಕಟ್ಟೆಗೆ ಬಂದಿದ್ದ ಜಾನ್ ಡೀರ್ 4020 ಟ್ರ್ಯಾಕ್ಟರ್‌ನ ಮಾಲೀಕ ಗಿರಿರಾಜ್ ಸಿಂಗ್, ‘ಈ ಟ್ರ್ಯಾಕ್ಟರ್ ಬಲಭೀಮ. ಬಸ್‌ಗಳನ್ನೂ ಎಳೆಯವಷ್ಟು ತಾಕತ್ತು ಇದರಲ್ಲಿ ಇದೆ. ಈಗ ತಂತ್ರಜ್ಞಾನ ಬದಲಾಗಿದೆ. ಆದರೆ, ಆ ಕಾಲದಲ್ಲಿ ಈ ಟ್ರ್ಯಾಕ್ಟರ್ ಅತ್ಯಂತ ಜನಪ್ರಿಯವಾಗಿತ್ತು. ಇದೇ ಕಂಪನಿಯ ಮೂರು ಟ್ರ್ಯಾಕ್ಟರ್‌ಗಳು ನಮ್ಮ ಬಳಿ ಇವೆ. ಆದರೆ, ಇದು ಅತ್ಯಂತ ಅಮೂಲ್ಯವಾದದ್ದು’ ಎಂದು ಅವರು ಖುಷಿ ಹಂಚಿಕೊಂಡರು.

ಹರಿಯಾಣದ ಅಕಲ್‌ಪ್ರೀತ್ ಸಿಂಗ್ ಅವರ ಎಚ್‌ಎಂಟಿ ಟ್ರ್ಯಾಕ್ಟರ್ ಸಹ ಎಲ್ಲರ ಗಮನ ಸೆಳೆಯಿತು. ಎಚ್‌ಎಂಟಿ 5911 ಮಾದರಿಯ ಟ್ರ್ಯಾಕ್ಟರ್ ಅದು. ಟ್ರ್ಯಾಕ್ಟರ್‌ನ ಮಡ್‌ಗಾರ್ಡ್‌ಗಳ ಮೇಲೆ ಅಳವಡಿಸಿದ್ದ ಧ್ವನಿವರ್ಧಕದಿಂದ ಹೊರಹೊಮ್ಮುತ್ತಿದ್ದ ‘ರಂಗ್ ದೇ ಬಸಂತಿ ಚೋಲಾ’ ಗೀತೆಗೆ ರ್‍ಯಾಲಿಯಲ್ಲಿದ್ದ ರೈತರು ದನಿಗೂಡಿಸಿದ್ದರು. ‘1981ರಲ್ಲಿ ನನ್ನ ತಂದೆ ಇದನ್ನು ಖರೀದಿಸಿದ್ದರು. ಆಗ ಅದರ ಬೆಲೆ ₹ 80,000. ಈಗ ಇದರ ಮೌಲ್ಯ ₹ 8 ಲಕ್ಷದಷ್ಟು’ ಎಂದು ಅವರು ಹೇಳಿದರು. ಪರೇಡ್‌ನಲ್ಲಿ ಭಾಗವಹಿಸಲು ಎಂದೇ ಈ ಟ್ರ್ಯಾಕ್ಟರ್ ಅನ್ನು ಈಚೆಗೆ ರಿಪೇರಿ ಮಾಡಿಸಿದೆ ಎಂದು ಅಕಲ್‌ಪ್ರೀತ್ ಹೇಳಿದರು.

ಇವುಗಳನ್ನೂ ಓದಿ

ಹಿಂಸಾಚಾರ ನಡೆಸಿದ್ದು ಯಾರು? ಸಾಮಾಜಿಕ ತಾಣಗಳಲ್ಲಿ ಚರ್ಚೆ

ಚಳವಳಿ ಕೆಡಿಸಲು ಸಮಾಜಘಾತುಕರ ಪಿತೂರಿ: ರೈತ ಸಂಘಟನೆಗಳ ಆಕ್ರೋಶ

ದೆಹಲಿ ಹಿಂಸಾಚಾರ| ವಿರೋಧ ಪಕ್ಷಗಳಲ್ಲಿ ತಳಮಳ

ಕೆಂಪು ಕೋಟೆ: ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿ ಪ್ರತಿಭಟನಾಕಾರರ ಲಾಠಿ ಪ್ರಹಾರ!

ದೆಹಲಿ ಹಿಂಸಾಚಾರದಲ್ಲಿ 86 ಪೊಲೀಸ್ ಸಿಬ್ಬಂದಿಗೆ ಗಾಯ

ಕೆಂಪುಕೋಟೆಯಲ್ಲಿ ನಡೆದ ಘಟನೆ ವಿಷಾದಕರ: ಆರ್ಎಸ್ಎಸ್

‘ನಕಲಿ ರೈತರಿಂದ ಹಿಂಸಾಚಾರ’

ಟ್ರ್ಯಾಕ್ಟರ್ ಮಗುಚಿ ಒಬ್ಬ ರೈತ ಸಾವು; ದೆಹಲಿಯ ಹಲವೆಡೆ ಇಂಟರ್ನೆಟ್ ಸ್ಥಗಿತ

ದೆಹಲಿ ಕೆಂಪುಕೋಟೆ ಪ್ರವೇಶಿಸಿದ ರೈತರು, ಕೋಟೆ ಮೇಲೆ ಧ್ವಜಾರೋಹಣ

Video: ಬೆಂಗಳೂರಿನತ್ತ ನೂರಾರು ಟ್ರಾಕ್ಟರ್ನಲ್ಲಿ ಆಗಮಿಸುತ್ತಿರುವ ರೈತರು

Photos: ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದ ರೈತರ ಪ್ರತಿಭಟನೆ

ಚಿತ್ರಗಳಲ್ಲಿ ನೋಡಿ: ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದ ರೈತರ ಪ್ರತಿಭಟನೆ...

VIDEO: ಬೆಂಗಳೂರಲ್ಲಿ ನೃತ್ಯ ಮಾಡಿ ರೈತರ ಪ್ರತಿಭಟನೆ

ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದ ಪ್ರತಿಭಟನಾನಿರತ ರೈತರು

ಟ್ರ್ಯಾಕ್ಟರ್ ರ್ಯಾಲಿ| ಕೆಂಪುಕೋಟೆಗೆ ರೈತರ ಲಗ್ಗೆ: ಹಿಂಸೆಗೆ ತಿರುಗಿದ ಹೋರಾಟ

ಕಲಬುರ್ಗಿಯಲ್ಲಿ 300ಕ್ಕೂ ಹೆಚ್ಚು ಟ್ರ್ಯಾಕ್ಟರ್ ರ್ಯಾಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.