ಶನಿವಾರ, ಮಾರ್ಚ್ 25, 2023
23 °C

ಆ್ಯಂಬುಲೆನ್ಸ್‌ಗೆ ದಾರಿಬಿಟ್ಟ ಮೋದಿ: ಕ್ಯಾಮೆರ ಸಿದ್ಧವಿತ್ತಾ ಎಂದ ಟಿಆರ್‌ಎಸ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆ್ಯಂಬುಲೆನ್ಸ್‌ಗಾಗಿ ಕಾದು ದಾರಿಬಿಟ್ಟುಕೊಟ್ಟ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೊವನ್ನು ಹಂಚಿಕೊಂಡಿರುವ ತೆಲಂಗಾಣ ರಾಷ್ಟ್ರೀಯ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗವು, ದೃಶ್ಯವನ್ನು ಇಷ್ಟು ಸ್ಪಷ್ಟವಾಗಿ ಸೆರೆ ಹಿಡಿಯುವ ಈ ಪ್ರಹಸನಕ್ಕೆ ಕ್ಯಾಮೆರ ಸಿದ್ಧವಿತ್ತಾ ಎಂದು ವ್ಯಂಗವಾಡಿದೆ. 

ಪ್ರಧಾನಿ ಬರುವ ರಸ್ತೆಯನ್ನು ತಡೆ ಹಿಡಿಯಲಾಗಿದೆ. ಪ್ರಧಾನಿ ಕಾರು ನಿಂತಿರುತ್ತದೆ. ಆಗ ಆ್ಯಂಬುಲೆನ್ಸ್‌ ಚಲಿಸುತ್ತದೆ. ಮೋದಿ ಕಾರು ಹಾಗೂ ಆ್ಯಂಬುಲೆನ್ಸ್‌ ಎರಡೂ ಸ್ಪಷ್ಟವಾಗಿ ಒಂದೇ ಆಂಗಲ್‌ನಲ್ಲಿ ಕಾಣುವಂತೆ ಒಂದು ಫ್ರೇಂನಲ್ಲಿ ಗೋಚರಿಸುತ್ತದೆ. ಆ್ಯಂಬುಲೆನ್ಸ್‌ ಸಾಗಿದ ಬಳಿಕ ಮೋದಿ ಜನತೆಗೆ ಕೈಬೀಸುತ್ತ ಪ್ರಯಾಣ ಮುಂದುವರಿಸುತ್ತಾರೆ. ಹೀಗಾಗಿ ಸಂಯೋಜಿತ ದೃಶ್ಯದಂತೆ ಕಾಣುವ ಈ ವಿಡಿಯೊವನ್ನು ಟಿಆರ್‌ಎಸ್‌ ಟೀಕಿಸಿದೆ. 

ಕಳೆದ ತಿಂಗಳು ಗುಜರಾತ್‌ ಭೇಟಿಯ ವೇಳೆಯೂ ಮೋದಿ ಆ್ಯಂಬುಲೆನ್ಸ್‌ ಒಂದಕ್ಕೆ ಜಾಗ ಬಿಟ್ಟಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು