ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಮಹಿಳೆಯರಿಗಾಗಿ ನಾಲ್ಕು ವಿಶೇಷ ರೈಲುಗಳ ವ್ಯವಸ್ಥೆ

Last Updated 21 ಅಕ್ಟೋಬರ್ 2020, 7:29 IST
ಅಕ್ಷರ ಗಾತ್ರ

ಮುಂಬೈ: ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಮುಂಬೈ ಮತ್ತು ಉಪನಗರಗಳ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ಅನುಮತಿ ನೀಡಿದ ಬೆನ್ನಲ್ಲೇ ಪಶ್ಚಿಮ ರೈಲ್ವೆ ವಿಭಾಗವು ಉ‍ಪನಗರಗಳಲ್ಲಿ ನಾಲ್ಕು ‘ಮಹಿಳಾ ವಿಶೇಷ’ ರೈಲುಗಳ ವ್ಯವಸ್ಥೆ ಮಾಡಿದೆ.

ಸದ್ಯ ಪಶ್ಚಿಮ ಮತ್ತು ಕೇಂದ್ರ ರೈಲ್ವೆ ವಿಭಾಗದ ಸ್ಥಳೀಯ ರೈಲುಗಳಲ್ಲಿ ಪ್ರಯಣಿಸಲು ‍ಮಹಿಳಾ ಪ್ರಯಾಣಿಕರಿಗೆ ಅನುಮತಿ ನೀಡಲಾಗಿದೆ. ಪಶ್ಚಿಮ ವಿಭಾಗವು ನಾಲ್ಕು ಮಹಿಳಾ ವಿಶೇಷ ರೈಲುಗಳನ್ನು ಸೇರ್ಪಡೆಗೊಳಿಸಿದ್ದು, ಮಹಿಳಾ ಪ್ರಯಾಣಿಕರಿಗಾಗಿ ಒಟ್ಟು ಆರು ರೈಲುಗಳು ಸಂಚರಿಸಲಿವೆ. ಮುಂಬೈ ಮತ್ತು ಉಪನಗರಗಳಲ್ಲಿ ಕೇಂದ್ರ ರೈಲ್ವೆ ವಿಭಾಗದ ನಾಲ್ಕು ಮಹಿಳಾ ವಿಶೇಷ ರೈಲು ಸೇರಿದಂತೆ ಒಟ್ಟು 706 ಸ್ಥಳೀಯ ರೈಲುಗಳು ಸಂಚರಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಮತ್ತು ಪಶ್ಚಿಮ ರೈಲ್ವೆ ವಿಭಾಗದ ಸ್ಥಳೀಯ ರೈಲುಗಳಲ್ಲಿ ಎಲ್ಲಾ ಮಹಿಳಾ ಪ್ರಯಣಿಕರಿಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಮತ್ತು ಸಂಜೆ 7 ಗಂಟೆ ಬಳಿಕ ಪ್ರಯಾಣಿಸಲು ರೈಲ್ವೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT