ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ಜನಧನ್‌ ಖಾತೆಯಿಂದ ಹಣ ತೆಗೆಯಲು ₹100 ಶುಲ್ಕ?

Last Updated 3 ನವೆಂಬರ್ 2020, 15:20 IST
ಅಕ್ಷರ ಗಾತ್ರ

ಸರ್ಕಾರದ ಸಲಹೆ ಮೇರೆಗೆ ದೇಶದ ಕೋಟ್ಯಂತರ ಜನರು ಉಚಿತವಾಗಿ ಜನಧನ್‌ ಖಾತೆಯನ್ನು ತೆರೆದಿದ್ದಾರೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಜನಧನ್ ಖಾತೆಯಿಂದ ಹಣವನ್ನು ತೆಗೆಯುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಪ್ರತೀಬಾರಿ ₹100 ಶುಲ್ಕ ಪಡೆಯಲಿವೆ. ಹೀಗೆಂದು ಹಿಂದಿ ಪತ್ರಿಕೆಯೊಂದು ವರದಿ ಮಾಡಿದ್ದು, ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸಿದೆ.

ಜನಧನ್‌ ಖಾತೆಯಿಂದ ಹಣ ತೆಗೆದರೆ ಶುಲ್ಕ ವಿಧಿಸಬೇಕು ಎಂಬುದಾಗಿ ಆರ್‌ಬಿಐ ಯಾವುದೇ ನಿಯಮ ರೂಪಿಸಿಲ್ಲ. ಪತ್ರಿಕಾ ವರದಿ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಜನಧನ್‌ ಗ್ರಾಹಕರು ಎಂದಿನಂತೆ ಉಚಿತ ಸೇವೆ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT