ಭಾನುವಾರ, ಜೂನ್ 26, 2022
21 °C

ಕಾಶ್ಮೀರಿ ಪಂಡಿತರು ಇನ್ನೂ ಅಸುರಕ್ಷಿತ ಏಕೆ? ಕೇಂದ್ರಕ್ಕೆ ಕೇಜ್ರಿವಾಲ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಶ್ಮೀರಿ ಪಂಡಿತರು ಏಕೆ ಇನ್ನೂ ಸುರಕ್ಷಿತರಲ್ಲ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ ಕಾಶ್ಮೀರಿ ಪಂಡಿತರೊಬ್ಬರನ್ನು (ರಾಹುಲ್‌ ಭಟ್‌) ಅವರ ಕಚೇರಿಯಲ್ಲೇ ಹತ್ಯೆ ಮಾಡಲಾಯಿತು. ಕಾಶ್ಮೀರಿ ಪಂಡಿತರು ಏಕೆ ಇನ್ನೂ ಸುರಕ್ಷಿತವಾಗಿಲ್ಲ? ದೇಶ ಆತಂಕದಲ್ಲಿದೆ ಎಂಬುದು ಕಾಶ್ಮೀರಿ ಪಂಡಿತ ಸಮುದಾಯಕ್ಕೂ ಅನಿಸುತ್ತಿರಬಹುದು. ಕಾಶ್ಮೀರದಲ್ಲಿರುವ ಸಮುದಾಯದ ಬಹಳಷ್ಟು ಮಂದಿ ಪ್ರಧಾನ ಮಂತ್ರಿ ಪ್ಯಾಕೇಜ್‌ ಅಡಿಯಲ್ಲಿ ಕಾಶ್ಮೀರಕ್ಕೆ ತೆರಳಿದವರಾಗಿದ್ದಾರೆ. ಈ ಘಟನೆ ನಂತರ ಅವರೆಲ್ಲ ಭಯಭೀತರಾಗಿದ್ದಾರೆ’ ಎಂದು ಅವರು ಹೇಳಿದರು.

‘ಘಟನೆ ನಂತರ ಕಾಶ್ಮೀರಿ ಪಂಡಿತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರತಿಭಟಿಸಲು ಮುಂದಾಗಿದ್ದರು. ಆದರೆ ಅವರನ್ನು ತಡೆಯಲಾಗಿದೆ. ಅವರ ಮೇಲೆ ಹಲ್ಲೆ ಮಾಡಲಾಗಿದೆ. ಅವರ ಮನೆಗಳಿಗೆ ಬೀಗ ಹಾಕಲಾಗಿದೆ. ರಾಜಕೀಯ ಮಾಡಲು ಇದು ಸಮಯವಲ್ಲ. ಸಮುದಾಯ ಈಗ ಸುರಕ್ಷತೆ ಬಯಸುತ್ತಿದೆ. ಸುರಕ್ಷತೆ ಸಿಗದೇ ಹೋದರೆ, ಇನ್ನಿತರ ಕಾಶ್ಮೀರಿ ಪಂಡಿತರು ಕಣಿವೆಗೆ ಹಿಂತಿರುಗುವುದಾದರೂ ಹೇಗೆ? ಅವರಿಗೆ ಭದ್ರತೆ ಒದಗಿಸುವತ್ತ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಬೇಕು’ ಎಂದು ಕೇಜ್ರಿವಾಲ್‌ ಆಗ್ರಹಿಸಿದರು.

ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಯಲ್ಲಿ ಕಳೆದ ಗುರುವಾರ ಉಗ್ರನೊಬ್ಬ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರ ರಾಹುಲ್‌ ಭಟ್‌ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.

ಇವುಗಳನ್ನು ಓದಿ 

ತಹಶೀಲ್ ಕಚೇರಿಯೊಳಗೆ ನುಗ್ಗಿ ಕಾಶ್ಮೀರಿ ಪಂಡಿತ್‌ ನೌಕರನ ಹತ್ಯೆ

ಪಾಕ್ ಕಡೆ ಬೆರಳು ತೋರದೇ ಕಾಶ್ಮೀರಿ ಪಂಡಿತರಿಗಾಗಿ ನೀವೇನು ಮಾಡುತ್ತೀರಿ? ರಾವುತ್‌

‘ಇಲ್ಲಿ ನಾವು ಸುರಕ್ಷಿತವಲ್ಲ’: ಕಾಶ್ಮೀರಿ ಪಂಡಿತ ನೌಕರ ವರ್ಗ ಸಾಮೂಹಿಕ ರಾಜೀನಾಮೆ

ಕಾಶ್ಮೀರಿ ಪಂಡಿತ ಹತ್ಯೆ ಪ್ರಕರಣ: ಕಣಿವೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ, ಪ್ರತಿಭಟನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು