ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರು, ಸಿಬ್ಬಂದಿಯಿಂದ ಹಲ್ಲೆ– ಅತ್ಯಾಚಾರ ಆರೋಪ: ಸಚಿವೆ ಸ್ಮೃತಿ ಇರಾನಿಗೆ ದೂರು

Last Updated 13 ಜೂನ್ 2021, 11:08 IST
ಅಕ್ಷರ ಗಾತ್ರ

ಅಮೇಥಿ, ಉತ್ತರ ಪ್ರದೇಶ: ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ 40 ವರ್ಷದ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದು, ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಮಾರನೇ ದಿನವೇ, ಮತ್ತೊಂದು ಆಸ್ಪತ್ರೆಗೆ ಚಿಕಿತ್ಸೆಗೆ ಒಯ್ಯುವ ಮಾರ್ಗದಲ್ಲಿ ಜೂನ್‌ 12ರಂದು ತಾಯಿ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ ಎಂದೂ ದೂರು ನೀಡಿದ್ದಾರೆ.

ಪೊಲೀಸರು ತನ್ನ ಅಹವಾಲು ಆಲಿಸಿಲ್ಲ ಎಂದು ತಿಳಿಸಿರುವ ಮೃತಳ ಮಗಳು, ಶನಿವಾರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂಸದೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈ ಕುರಿತು ಅಹವಾಲು ಸಲ್ಲಿಸಿದರು.

ಸಂಸದೆಯ ಸೂಚನೆಯನ್ನು ಆಧರಿಸಿ ಅಮೇಥಿಯ ಜಿಲ್ಲಾಧಿಕಾರಿ ಅರುಣ್ ಕುಮಾರ್ ಅವರು ಆರೋಪ ಕುರಿತ ತನಿಖೆಗೆ ತಂಡವೊಂದನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT