ಶುಕ್ರವಾರ, ಏಪ್ರಿಲ್ 23, 2021
31 °C

ಕಂದಹಾರ್ ವಿಮಾನ ಹೈಜಾಕ್ ವೇಳೆ ದೀದಿ ಧೈರ್ಯ ಸ್ಮರಿಸಿದ ಯಶವಂತ ಸಿನ್ಹಾ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ, 1999ರಲ್ಲಿ ಭಯೋತ್ಪಾದಕರಿಂದ ಕಂದಹಾರ್ ವಿಮಾನ ಹೈಜಾಕ್ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತೋರಿದ ಧೈರ್ಯವನ್ನು ಸ್ಮರಿಸಿದ್ದಾರೆ.

1999ರಲ್ಲಿ ಡಿಸೆಂಬರ್ 24ರಂದು ಏರ್ ಇಂಡಿಯಾ ವಿಮಾನವನ್ನು ಭಯೋತ್ಪಾದಕರು ಅಪಹರಿಸಿದ್ದರು.

'ನಾನು ನಿಮಗೆಲ್ಲರಿಗೂ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿ ಅಪಘಾನಿಸ್ತಾನದ ಕಂದಹಾರಕ್ಕೆ ಕೊಂಡೊಯ್ಯುವ ವೇಳೆಯಲ್ಲಿ ನಾವು ಕ್ಯಾಬಿನೆಟ್ ಸಭೆಯನ್ನು ನಡೆಸುತ್ತಿದ್ದೆವು. ಈ ಸಂದರ್ಭದಲ್ಲಿ ಮಮತಾ ಅವರು ಭಾರತೀಯ ಪ್ರಯಾಣಿಕರ ಬಿಡುಗಡೆಗಾಗಿ ಸ್ವತ: ತಾವೇ ಒತ್ತೆಯಾಳಾಗಿ ಹೋಗಲು ಬಯಸಿದ್ದರು' ಎಂದು ಯಶವಂತ ಸಿನ್ಹಾ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 

ಮಮತಾ ಮೊದಲಿನಿಂದಲೂ ಹೋರಾಟಗಾರ್ತಿ. ಪ್ರಾಣದ ಭಯ ಆಕೆಗಿಲ್ಲ ಎಂದು ಬಂಗಾಳ ಮುಖ್ಯಮಂತ್ರಿಯ ಧೈರ್ಯವನ್ನು ಮೆಚ್ಚಿದರು.

ಕಂದಹಾರ ವಿಮಾನ ಹೈಜಾಕ್ ಪ್ರಕರಣದ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಯಶವಂತ ಸಿನ್ಹಾ ಕೇಂದ್ರ ಹಣಕಾಸು ಸಚಿವರಾಗಿದ್ದರು. ಹಾಗೆಯೇ ಮಮತಾ ಬ್ಯಾನರ್ಜಿ ರೈಲ್ವೆ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು.

ಏರ್ ಇಂಡಿಯಾದ ಐಸಿ 814 ವಿಮಾನವನ್ನು ಉಗ್ರರು ಅಪಹರಿಸಿದ್ದರು. ಬಳಿಕ ಮೂವರು ಉಗ್ರರನ್ನು ಜೈಲಿನಿಂದ ಬಿಡುಗಡೆಗೊಳಿಸಿದ ಬಳಿಕ ಭಾರತೀಯ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು