ಶನಿವಾರ, ಜನವರಿ 16, 2021
28 °C

ಹೆಸರು ಬದಲಿಸುವವರ ಹೆಸರೇ ಬದಲಾಗಲಿದೆ, ಹೈದರಾಬಾದ್‌ ಅಲ್ಲ: ಯೋಗಿಗೆ ಒವೈಸಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್‌ ಒವೈಸಿ ವಾಗ್ದಾಳಿ ನಡೆಸಿದ್ದಾರೆ.

'ಅವರು (ಬಿಜೆಪಿ) ಮರುನಾಮಕರಣ ಮಾಡಲು ಬಯಸುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಮರುನಾಮಕರಣ ಮಾಡುತ್ತಿದ್ದಾರೆ. ಹೈದರಾಬಾದ್‌ಗೆ ಮರುನಾಮಕರಣ ಮಾಡುವವರ ಹೆಸರು ಬದಲಾಗಬಹುದು. ಆದರೆ, ಹೈದರಾಬಾದ್ ಶಾಶ್ವತವಾಗಿ ಉಳಿಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಇಲ್ಲಿಗೆ ಬರುತ್ತಾರೆ. ಈ ನಗರದ ಹೆಸರು ಬದಲಿಸುವ ಮಾತಾಡುತ್ತಾರೆ. ಹೆಸರು ಬದಲಿಸುವ ಗುತ್ತಿಗೆಯನ್ನೇನಾದರೂ ಇವರು ಪಡೆದಿದ್ದಾರೆಯೇ?' ಎಂದು ಅವರು ಪ್ರಶ್ನೆ ಮಾಡಿದರು.

'ಫೈಜಾಬಾದ್ ಅಯೋಧ್ಯೆಯಾಗಲು ಸಾಧ್ಯವಾದರೆ, ಅಲಹಾಬಾದ್ ಪ್ರಯಾಗರಾಜ್‌ ಆಗಬಹುದಾದರೆ, ಹೈದರಾಬಾದ್ ಭಾಗ್ಯನಗರವಾಗಲು ಏಕೆ ಸಾಧ್ಯವಿಲ್ಲ?' ಎಂದು ಹೈದರಾಬಾದ್‌ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್‌ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು