ಬೆಂಗಳೂರು: ಕೋವಿಡ್–19 ಡೆಲ್ಟಾ ರೂಪಾಂತರವು ಜಗತ್ತಿನಾದ್ಯಂತ 32ಉಪ ರೂಪಾಂತರಗಳನ್ನು ಹೊಂದಿದ್ದು, ಈ ಪೈಕಿ16 ಉಪ ತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ.

‘ರಾಜ್ಯದಲ್ಲಿ ಈಗಾಗಲೇ ಕಾಣಿಸಿಕೊಂಡಿರುವಎವೈ.4 ಮತ್ತು ಎವೈ.12ನ ರೂಪಾಂತರವು ನಿಧಾನವಾಗಿ ಕಡಿಮೆಯಾಗುತ್ತಿರು
ವುದು ಅಧ್ಯಯನದಿಂದ ತಿಳಿದುಬಂದಿದೆ.

ಈ ವೈರಾಣು ತನ್ನ ಸ್ಪೈಕ್ ಪ್ರೋಟಿನ್‌ನ ನೆರವಿನಿಂದ ಮನುಷ್ಯನ ಕೋಶಗಳಿಗೆ ಹಾನಿ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಇವುಗಳ ವರ್ತನೆ ಮೇಲೆ ನಿಗಾ ಇಡುವುದು ತುಂಬಾ ಅವಶ್ಯ’ ಎಂದು ರಾಜ್ಯ ಕೋವಿಡ್–19 ಜಿನೋ ಮಿಕ್ ಸರ್ವೇಲೆನ್ಸ್ ಸಮಿತಿಯ ಸದಸ್ಯರೂ ಆಗಿರುವ ಎಚ್‌ಸಿಜಿ ಆಸ್ಪತ್ರೆಯ ಡೀನ್ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.

ಎವೈ.4 ಎಂದು ಕರೆಯಲ್ಪಡುವ ಡೆಲ್ಟಾ ರೂಪಾಂತರದ ಉಪ ರೂಪಾಂತರದಲ್ಲಿ ಸ್ಪೈಕ್ ಪ್ರೋಟಿನ್ ಮ್ಯುಟೇಷನ್ (ಜಿ142ಡಿ) ಕರ್ನಾಟಕದ ಮಟ್ಟಿಗೆ ಶೇ26ರಷ್ಟು ಕಂಡುಬಂದಿದೆ. ಎವೈ.12 ರೂಪಾಂ ತರದಲ್ಲಿ ಇದು ಕೇವಲ ಶೇ1.3ರಷ್ಟು ಕಂಡುಬಂದಿದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.

‘ರೂಪಾಂತರಗಳು ಕಡಿಮೆಯಾಗುತ್ತಿರುವುದರಿಂದ ಡೆಲ್ಟಾ ರೂಪಾಂತರವು ನಿಧಾನವಾಗಿ ಕ್ಷೀಣಿಸುತ್ತಿದೆ. ಹಾಗೆಂದು ಇದನ್ನು ಅಲಕ್ಷಿಸುವಂತಿಲ್ಲ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.