ಸೋಮವಾರ, ಜೂನ್ 14, 2021
20 °C

ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ‌ ಪದಕಕ್ಕೆ ರಾಜ್ಯದ 6 ಪೊಲೀಸ್‌ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದ ಗೃಹ ಸಚಿವರ ವಿಶೇಷ ಕಾರ್ಯಾಚರಣೆ‌ ಪದಕಕ್ಕೆ ರಾಜ್ಯದ ಆರು ಜನ ಪೊಲೀಸ್‌ ಸಿಬ್ಬಂದಿ ಆಯ್ಕೆಯಾಗಿದ್ದಾರೆ.

2019-20ನೇ ಸಾಲಿನಲ್ಲಿ ಸಲ್ಲಿಸಿರುವ ಸೇವೆಗೆ ಈ ಪದಕ ನೀಡಲಾಗಿದೆ.


ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ

ರಾಜ್ಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಡಿವೈಎಸ್ ಪಿ‌ಗಳಾದ ಡಿ.ಕುಮಾರ್,  ಎಸ್.ಕೆ. ಉಮೇಶ್, ಇನ್ಸ್ ಪೆಕ್ಟರ್ ಸುಶೀಲಾ, ಕಾನ್ ಸ್ಟೆಬಲ್ ಗಳಾದ ವೈ.ಶಂಕರ್ ಮತ್ತು ಎನ್ .ಪ್ರಕಾಶ್ ಅವರೇ ವಿಶೇಷ‌ ಪದಕಕ್ಕೆ‌ ಭಾಜನರಾದ ಸಿಬ್ಬಂದಿ.

2019ರ ಡಿಸೆಂಬರ್ 21ರಿಂದ 2020ರ ಜನವರಿ 20ರವರೆಗೆ ನಡೆದಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಈ ಸಿಬ್ಬಂದಿ ಭಾಗವಹಿಸಿದ್ದರು ಎಂದು ಕೇಂದ್ರದ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ.ಕೆ. ಘೋಷ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ‌.

ರಾಜ್ಯದ‌ ಸಿಬ್ಬಂದಿ ಅಲ್ಲದೆ, ದೆಹಲಿ,ಗುಜರಾತ್, ತಮಿಳುನಾಡು ಮತ್ತು ಕೇರಳದ ಪೊಲೀಸ್ ಸಿಬ್ಬಂದಿಯನ್ನೂ ಪದಕಕ್ಕೆ  ಆಯ್ಕೆ‌ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು