ಶನಿವಾರ, ಫೆಬ್ರವರಿ 4, 2023
28 °C

ಜೀವ ಬೆದರಿಕೆ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಶಿವಮೊಗ್ಗ
ದಿಂದ ನ.28ರಂದು ಬೆದರಿಕೆ ಪತ್ರ ಬಂದಿದ್ದು, ಇಲ್ಲಿನ ಜಯಲಕ್ಷ್ಮಿಪುರಂ ಪೊಲೀಸ್‌ ಠಾಣೆಗೆ ಅವರು ಅಂದೇ ದೂರು ನೀಡಿದ್ದಾರೆ. 

‘ಸಾಯುವ, ಕೊಲೆ ಆಗುವ ಹಂತ ತಲುಪಿದ್ದೀರ. ನೀವು ನಂಬಿರುವ ದೇವರು ಸಹ ಉಳಿಸುವುದಿಲ್ಲವೆಂದು
ಬೆದರಿಕೆ ಒಡ್ಡಿದ್ದಾರೆ. ಪತ್ರವು ಶ್ರೀರಾಂ, ಕೋಟ ರಸ್ತೆ, ಬ್ರಾಹ್ಮಣ ಬೀದಿ, ಶಿವಮೊಗ್ಗ ಜಿಲ್ಲೆ –ವಿಳಾಸದಿಂದ ಬಂದಿದೆ. ಅಲ್ಲಿಂದಲೇ ಇನ್ನೊಂದು ಅಂಚೆ ಕಾರ್ಡ್‌ ಕೂಡ ಬಂದಿದೆ. ಜೀವಹಾನಿಯಾಗುವ ಸಂಭವವಿರುವುದರಿಂದ ರಕ್ಷಣೆ ನೀಡಿ’ ಎಂದು ದೂರಿನಲ್ಲಿ ಕೋರಿದ್ದಾರೆ.

‘ಮಹೇಶಚಂದ್ರ ಗುರು ಅವರು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿ, ಆ ವಿಡಿಯೊವನ್ನು ಪ್ರಸಾರ ಮಾಡುತ್ತಿದ್ದು, ಅದರಿಂದ ಪ್ರಚೋದನೆಗೊಂಡ ಕೆಲವರು ಕೂಡ ನಿಂದಿಸಲು ತೊಡಗಿದ್ದಾರೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು