ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ: ಅಜಯ್ ದೇವಗನ್ಗೆ ಕನ್ನಡಿಗರ ಗುದ್ದು

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಎಂದು ಪ್ರತಿಪಾದಿಸಿರುವ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, 'ಹಿಂದಿ ಯಾವತ್ತೂ ಹಾಗೂ ಯಾವತ್ತಿಗೂ ನಮ್ಮ ರಾಷ್ಟ್ರ ಭಾಷೆ ಅಲ್ಲ' ಎಂದಿದ್ದಾರೆ.
ನಟ ಕಿಚ್ಚ ಸುದೀಪ್ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಕುರಿತು ಮಾತನಾಡುತ್ತ, 'ಹಿಂದಿಯಿಂದ ಪ್ಯಾನ್ ಇಂಡಿಯಾ ಸಿನಿಮಾಗಳು ಬರುತ್ತಿವೆ. ಅವರು ತೆಲುಗು, ತಮಿಳು ಭಾಷೆ ಡಬ್ ಮಾಡಿ ಒದ್ದಾಡುತ್ತಿದ್ದಾರೆ. ಈಗ ಹಿಂದಿ ರಾಷ್ಟ್ರಭಾಷೆ ಅಲ್ಲ,...' ಎಂದು ಹೇಳಿದ್ದರು. ಆ ಹೇಳಿಕೆ ಸಂಬಂಧ ಬುಧವಾರ ಅಜಯ್ ದೇವಗನ್ ಟ್ವೀಟ್ ಮಾಡಿ, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ' ಎಂದಿದ್ದರು.
ಈ ಮೂಲಕ 'ಹಿಂದಿ ರಾಷ್ಟ್ರ ಭಾಷೆ' ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Hindi was never & will never be our National Language.
It is the duty of every Indian to respect linguistic diversity of our Country.
Each language has its own rich history for its people to be proud of.
I am proud to be a Kannadiga!! https://t.co/SmT2gsfkgO
— Siddaramaiah (@siddaramaiah) April 27, 2022
ಇದನ್ನೂ ಓದಿ–ಹಿಂದಿ ರಾಷ್ಟ್ರ ಭಾಷೆ ಅಲ್ಲ: ಕಿಚ್ಚ ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಕಿಡಿ
ಅಜಯ್ ದೇವಗನ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ಹಿಂದಿ ಹಿಂದೆಯೂ ನಮ್ಮ ರಾಷ್ಟ್ರ ಭಾಷೆ ಆಗಿರಲಿಲ್ಲ. ಮುಂದೆಯೂ ಆಗುವುದಿಲ್ಲ ನಮ್ಮ ರಾಷ್ಟ್ರ ಭಾಷೆ ಆಗುವುದೂ ಇಲ್ಲ. ನಮ್ಮ ರಾಷ್ಟ್ರದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಭವ್ಯ ಇತಿಹಾಸವಿದ್ದು, ಆ ಭಾಷೆಯ ಜನರಿಗೆ ಹೆಮ್ಮೆ ತರುವಂತಿದೆ. ನಾನು ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ' ಎಂದು ಹೇಳಿದ್ದಾರೆ.
ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ,ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ,ನಮ್ಮಂತೆ ನೀವು ನಮ್ಮನ್ನು, ನಮ್ಮ ಬಾಷೆಯನ್ನು ಗೌರವಿಸಿ.ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ತ್ರ ಭಾಷೆಯಲ್ಲ.ನಿಮ್ಮ ಧ್ವನಿಗೆ ನಮ್ಮ ಧ್ವನಿ @KicchaSudeep ಸರ್ https://t.co/Hvje7dfvJK
— Sathish Ninasam (@SathishNinasam) April 27, 2022
ನಟ ನೀನಾಸಂ ಸತೀಶ್, ಹಿಂದಿ ಭಾಷೆಯ ನೆಲದಲ್ಲಿ ಕನ್ನಡ ಸಿನಿಮಾಗಳ ಪ್ರಯಾಣದ ಬಗ್ಗೆ ಹಂಚಿಕೊಂಡಿದ್ದಾರೆ. 'ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ, ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ, ನಮ್ಮಂತೆ ನೀವು ನಮ್ಮನ್ನು, ನಮ್ಮ ಭಾಷೆಯನ್ನು ಗೌರವಿಸಿ. ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ' ಎಂದು ಹಂಚಿಕೊಳ್ಳುವ ಜೊತೆಗೆ ಕಿಚ್ಚ ಸುದೀಪ್ ಅವರನ್ನು ಟ್ಯಾಗ್ ಮಾಡಿ, ನಿಮ್ಮ ಧ್ವನಿಗೆ ನಮ್ಮ ಧ್ವನಿ ಎಂದಿದ್ದಾರೆ.
ಕನ್ನಡ ಹೋರಾಟಗಾರರು ಅಜಯ್ ದೇವಗನ್ ಹೇಳಿಕೆಗೆ ಕಿಡಿಕಾರಿದ್ದು, 'ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ' ಎಂದು ಪ್ರಕಟಿಸಿದ್ದಾರೆ.
ಕನ್ನಡಿಗರು ಹೇಳ್ತಿದ್ದೀವಿ ಕೇಳಿಸಿಕೊಳ್ಳಿ@ajaydevgn
"ಪಾನ್ ಮಾಸಲಾ ಆರೋಗ್ಯಕ್ಕೆ ಒಳ್ಳೇದು ಅಲ್ಲಾ..
ಹಿಂದಿ ರಾಷ್ಟ್ರಭಾಷೆಯು ಅಲ್ಲಾ..."ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ..@KicchaSudeep
ಜೈ ಕನ್ನಡ❤️💛
ಜೈ ಕರ್ನಾಟಕ..❤️💛#ಹಿಂದಿರಾಷ್ಟ್ರಭಾಷೆಯಲ್ಲಾ#ಕನ್ನಡ#kannada— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) April 27, 2022
ದೇವಗನ್ ಅವರನ್ನು ಕುರಿತು 'ಪಾನ್ ಮಸಾಲಾ ಆರೋಗ್ಯಕ್ಕೆ ಒಳ್ಳೇದು ಅಲ್ಲಾ...ಹಿಂದಿ ರಾಷ್ಟ್ರಭಾಷೆಯು ಅಲ್ಲಾ...' ಎಂದು ರೂಪೇಶ್ ರಾಜಣ್ಣ ಎಂಬುವವರು ಟ್ವೀಟಿಸಿದ್ದಾರೆ.
ಅಜಯ್ ದೇವಗನ್ ರೀತಿಯ ದೊಡ್ಡ ಸ್ಟಾರ್ಗಳಿಗೇ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದು ತಿಳಿದಿಲ್ಲವಾದರೆ, ಎಷ್ಟು ದೊಡ್ಡ ಮಟ್ಟದಲ್ಲಿ ಸುಳ್ಳು ಹಬ್ಬಿಸಲಾಗಿದೆ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.
ಅಜಯ್ ದೇವ್ಗನ್ ನಂತಹ ದೊಡ್ಡ ಸ್ಟಾರ್ ಗಳಿಗೆ ಹಿಂದಿ ಈ ದೇಶದ ರಾಷ್ಟ್ರ ಭಾಷೆ ಅಲ್ಲ ಅನ್ನೋದು ಗೊತ್ತಿಲ್ಲ ಅಂದ್ರೆ ಇನ್ನು ಯಾವ್ ರೇಂಜ್ ಗೆ "ಹಿಂದಿ ನಮ್ಮ ರಾಷ್ಟ್ರ ಭಾಷೆ " ಅನ್ನುವ ಸುಳ್ಳನ್ನ ಹಬ್ಸಿದಾರೆ ಇಷ್ಟ್ ವರ್ಷ ಲೆಕ್ಕ ಹಾಕಿ. ಇನ್ಮೇಲೆ ಆದರು ಬೇರೆ ಬೇರೆ ಭಾಷೆ ಜನಗಳು ಜಾಗೃತರಾಗಬೇಕು.
— Narendra (@narendra_hv) April 27, 2022
ಅಜಯ್ ದೇವಗನ್ ಎಂಬ ಹಿಂದಿ ನಟ ನಮಗೆ ಹಿಂದಿ ರಾಷ್ಟ್ರ ಭಾಷೆ ಎಂಬ ಭ್ರಮೆಯಲ್ಲಿ ಇದ್ದಾರೆ🤦🏻♀️ಕಣಕಣದಲ್ಲೂ ವಿಮಲ್🤣 #HindiIsNotNationalLanguage
— Purvi Raju 🇮🇳ಪೂರ್ವಿ (@rajpurvii) April 27, 2022
ಇವರಿಗೆ ಪಾನ್ ಮಸಾಲ ಮೇಲೆ ಇರುವ ಜ್ಞಾನ
ನಮ್ಮ ದೇಶದ ಸಂವಿಧಾನದ ಮೇಲೆ ಇದ್ರೆ ಅರ್ಥ ಆಗ್ತಿತ್ತು ಹಿಂದಿ ಅಧಿಕೃತ ಭಾಷೆ ಅಷ್ಟೇ,ರಾಷ್ಟ್ರ ಭಾಷೆ ಅಲ್ಲ ಎಂದು
ಹಿಂದಿ ಯಾವಾಗ ರಾಷ್ಟ್ರೀಯ ಭಾಷೆ ಆಯ್ತು!?????#stopHindiImposition #ಹಿಂದಿ_ಹೇರಿಕೆ_ನಿಲ್ಲಿಸಿ #ಹಿಂದಿರಾಷ್ಟ್ರೀಯಭಾಷೆಅಲ್ಲ#HindiIsNotNationalLanguage pic.twitter.com/znfOZzIMEE— ಸೌಮ್ಯ ಕೆ ಶೆಟ್ಟರ್ (@shettar_soumya) April 27, 2022
ಕನ್ನಡಿಗರಿಗೆ ಹಿಂದಿ ಇಂಗ್ಲಿಷ್ ಭಾಷೆ ಬರೆಯಲು ಓದಲು ಬರುತ್ತದೆ
ನಿಮಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ?
ಆದರೆ ಕನ್ನಡಿಗರೆಲ್ಲ ಎಲ್ಲಾ ಭಾಷೆಯನ್ನು ಪ್ರೀತಿಸಿ ಗೌರವಿಸುತ್ತಾರೆ. ನಮಗೆ ಕನ್ನಡವೇ ತಾಯಿ ಕನ್ನಡವೇ ನಮ್ಮ ಭಾಷೆ ಕನ್ನಡ.
ಹಿಂದಿ ರಾಷ್ಟ್ರ ಭಾಷೆ ಅಲ್ಲ
ಇತಿಹಾಸ ಓದಿಕೊಳ್ಳಿ.
ಅಜಯ್ ಬಾಯ್ https://t.co/T7L6oAkYUd— Mallikarjun (@Mallika79671099) April 27, 2022
'... ನಿಮ್ಮ ಮಾತುಗಳು ನನಗೆ ಅನುವಾದ ಆದ ಸಂದರ್ಭದಲ್ಲಿ ತಪ್ಪಾಗಿರಬಹುದು...' ಎಂದು ಅಜಯ್ ದೇವಗನ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ಗೂ ಪ್ರತಿಕ್ರಿಯೆ ನೀಡಿರುವ ಸುದೀಪ್, 'ಸಂಪೂರ್ಣ ವಿಷಯವನ್ನು ತಿಳಿಯದೇ, ಪ್ರತಿಕ್ರಿಯೆ ನೀಡದೆ ಇರುವುದೂ ಮುಖ್ಯವಾಗುತ್ತದೆ. ನಿಮ್ಮನ್ನು ದೂಷಿಸುವುದಿಲ್ಲ. ಕ್ರಿಯಾಶೀಲ ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಟ್ವೀಟ್ ಬಂದಿದ್ದರೆ, ನನಗೆ ಸಂತಸವಾಗುತ್ತಿತ್ತು' ಎಂದಿದ್ದಾರೆ.
Translation & interpretations are perspectives sir. Tats the reason not reacting wothout knowing the complete matter,,,matters.:)
I don't blame you @ajaydevgn sir. Perhaps it would have been a happy moment if i had received a tweet from u for a creative reason.
Luv&Regards❤️ https://t.co/lRWfTYfFQi— Kichcha Sudeepa (@KicchaSudeep) April 27, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.