ಬೆಂಗಳೂರು: ವೈದ್ಯಕೀಯ ಶಿಕ್ಷಣದ ಮೇಲೆ ನೀಟ್ ಪರೀಕ್ಷೆ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ತಮಿಳುನಾಡು ಸರ್ಕಾರ ರಚಿಸಿದ್ದನ್ಯಾಯಮೂರ್ತಿ ಎ ಕೆ ರಾಜನ್ ಅವರ ವರದಿಯನ್ನು, ನೆರೆಯ ರಾಜ್ಯವುಕನ್ನಡದಲ್ಲೂ ಹೊರತಂದಿದೆ.

ಮೂಲತಃ ತಮಿಳು ಭಾಷೆಯ ಈ ವರದಿಯು ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು, ಮಲಯಾಳಂ, ಬಂಗಾಳಿ ಭಾಷೆಗಳಿಗೆ ಅನುವಾದಗೊಂಡಿವೆ.

ತಮಿಳುನಾಡಿನಲ್ಲಿನೀಟ್‌ನ ಪರಿಣಾಮ ಕಂಡುಹಿಡಿಯಲು ಅಲ್ಲಿನಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಎ.ಕೆ. ರಾಜನ್ ಸಮಿತಿಯು ಜುಲೈನಲ್ಲಿ 165 ಪುಟಗಳ ವರದಿ ಸಲ್ಲಿಸಿತ್ತು. ನೀಟ್ ತಮಿಳುನಾಡನ್ನು ಸ್ವಾತಂತ್ರ್ಯ ಪೂರ್ವ ಕಾಲಕ್ಕೆ ಕೊಂಡೊಯ್ಯುವುದಾಗಿ ಸಮಿತಿಅಭಿಪ್ರಾಯ ಪಟ್ಟಿತ್ತು. ಅಲ್ಲದೇ,ಅಗತ್ಯವಿರುವ ಕಾನೂನು ಮತ್ತು ಶಾಸಕಾಂಗ ಕಾರ್ಯವಿಧಾನಗಳನ್ನು ಅನುಸರಿಸಿ ಸರ್ಕಾರವು ಅದನ್ನು ಎಲ್ಲಾ ಹಂತಗಳಲ್ಲಿಯೂ ತೊಡೆದುಹಾಕಬೇಕು ಎಂದು ಸಲಹೆ ನೀಡಿತ್ತು.

ಜೊತೆಗೆ, ನೀಟ್ ಅನ್ನು ತೆಗೆದುಹಾಕುವ ಅಗತ್ಯವನ್ನು ಸೂಚಿಸುವ ಒಂದು ಕಾಯಿದೆಯನ್ನು ಅಂಗೀಕರಿಸಬಹುದು ಮತ್ತು ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಬಹುದು ಎಂದು ಸೂಚಿಸಿತ್ತು. ಇದೇ ಆಧಾರದಲ್ಲೇ ತಮಿಳುನಾಡು ಸರ್ಕಾರವು ನೀಟ್ ಅನ್ನು ತೆಗೆದು ಹಾಕುವ ಕಾಯ್ದೆಯನ್ನು ವಿಧಾನಸಭೆಯಲ್ಲಿ ಇತ್ತೀಚೆಗೆಮಂಡಿಸಿತ್ತು.

ಇದಾದ ನಂತರ, ನೀಟ್’ ವಿರೋಧಿಸಲು ಮತ್ತು ಶಿಕ್ಷಣದಲ್ಲಿ ‘ರಾಜ್ಯಗಳ ಆದ್ಯತೆ’ ಪುನರ್‌ಸ್ಥಾಪನೆಗೆ ಬೆಂಬಲ ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬಿಜೆಪಿಯೇತರ ಆಡಳಿತವಿರುವ 11 ರಾಜ್ಯಗಳು ಮತ್ತು ಗೋವಾದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಈಗ ನೀಟ್ ನಿರ್ಮೂಲನೆ ಮಾಡುವ ಶಿಫಾರಸುಗಳಿರುವಎ.ಕೆ ರಾಜನ್ ವರದಿಯನ್ನು ತಮಿಳುನಾಡು ಸರ್ಕಾರ ಕನ್ನಡ ಸೇರಿ ಕೆಲ ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.