ಬಾಗಲಕೋಟೆ: ಸಚಿವ ಮುರುಗೇಶ ನಿರಾಣಿ ಮಾಲೀಕತ್ವದ ಮುಧೋಳದ ಎಂ.ಆರ್.ನಿರಾಣಿ ಉದ್ಯಮ ಸಮೂಹದಿಂದ ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯಲ್ಲಿ ಕೇದಾರನಾಥ ಶುಗರ್ಸ್, ಬಾದಾಮಿ ಶುಗರ್ಸ್ ಪುನರಾರಂಭ ಕಾರ್ಯಕ್ರಮಕ್ಕೆ ಕೆಲವೇ ಹೊತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

ಸಮಾರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಬಿಗಿ ಭದ್ರತೆಯ ನಡುವೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.

ಬೆಳಗಾವಿಯಿಂದ ಹೆಲಿಕಾಪ್ಟರ್ ನಲ್ಲಿ ಕೆರಕಲಮಟ್ಟಿಗೆ ಬರಲಿರುವ ಅಮಿತ್ ಶಾ, ಕಾರ್ಖಾನೆಗಳ ಉದ್ಘಾಟನೆ ಹಾಗೂ ನಿರಾಣಿ ಸಮೂಹದಿಂದ ಪ್ರತಿದಿನ 75 ಸಾವಿರ ಟನ್ ಕಬ್ಬು ನುರಿಸುವ, 26 ಲಕ್ಷ ಲೀಟರ್ ಇಥೆನಾಲ್ ಹಾಗೂ 260 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ ಜೋಶಿ ಪಾಲ್ಗೊಳ್ಳಲಿದ್ದಾರೆ.

ನಿಗದಿತ ಕಾರ್ಯಕ್ರಮದಂತೆ ಬೆಳಿಗ್ಗೆ 10.30ಕ್ಕೆ ಅಮಿತ್ ಶಾ ಸಮಾರಂಭಕ್ಕೆ ಚಾಲನೆ ನೀಡಬೇಕಿತ್ತು. ಕಾರಣಾಂತರದಿಂದ ಅವರು ಬರವುದು ತಡವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಬರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.