ಮಂಗಳವಾರ, ಮಾರ್ಚ್ 28, 2023
31 °C

ಅಡಿಕೆ, ಕಾಳು ಮೆಣಸು ಆಮದು ಕಡಿವಾಣಕ್ಕೆ ರಾಜ್ಯಸಭೆಯಲ್ಲಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶಕ್ಕೆ ಅಡಿಕೆ, ಕಾಳು ಮೆಣಸು ಹಾಗೂ ಟೀ ಪದಾರ್ಥಗಳನ್ನು ಆಮದು ಮಾಡುತ್ತಿರುವುದರಿಂದ ಸ್ಥಳೀಯರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವುಗಳ ಆಮದಿಗೆ ಕಡಿವಾಣ ಹಾಕಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಒತ್ತಾಯಿಸಿದರು. 

ರಾಜ್ಯಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕರ್ನಾಟಕದಲ್ಲಿ ಅಡಿಕೆ ಕೃಷಿಯನ್ನು 20 ಲಕ್ಷ ಕುಟುಂಬಗಳು ಅವಲಂಬಿಸಿವೆ. ಆಮದಿನ ಪರಿಣಾಮದಿಂದ ಅಡಿಕೆ ಬೆಲೆ ಕ್ವಿಂಟಲ್‌ಗೆ ₹39 ಸಾವಿರಕ್ಕೆ ಇಳಿದಿದೆ. ನಮ್ಮ ದೇಶದಲ್ಲಿ ಅಗತ್ಯ ಅಡಿಕೆ ಲಭ್ಯ ಇದ್ದ ಸಂದರ್ಭದಲ್ಲೂ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಕಳೆದ ಮೂರು ವರ್ಷಗಳಲ್ಲಿ ಭಾರಿ ಪ್ರವಾಹದಿಂದ ಶೇ 33ರಷ್ಟು ಅಡಿಕೆ ಬೆಳೆ ನಾಶವಾಗಿದೆ’ ಎಂದರು.

‘ದೇಶದಲ್ಲಿ ಅತಿ ಹೆಚ್ಚು ಕಾಳುಮೆಣಸನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಆದರೆ, ವಿಯೆಟ್ನಾಂ, ಶ್ರೀಲಂಕಾದಿಂದ ಅಡಿಕೆ ಆಮದು ಮಾಡಲಾಗುತ್ತಿದೆ. ಇದರಿಂದ ಕಾಳುಮೆಣಸು ಬೆಲೆ ಕೆ.ಜಿ.ಗೆ ₹650ರಿಂದ ₹350ಕ್ಕೆ ಇಳಿದಿದೆ. ಹೀಗಾಗಿ, ಕೇಂದ್ರ ಸರ್ಕಾರವು ವ್ಯಾಪಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪುನರ್ ಪರಿಶೀಲಿಸಿ ನಮ್ಮ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು