ಸೋಮವಾರ, ಮಾರ್ಚ್ 27, 2023
32 °C

ರಾಜ್ಯದಲ್ಲಿ ಎರಡು ತಿಂಗಳಲ್ಲಿ 27 ಸಾವಿರ ಟ್ರಾನ್ಸ್‌ಫಾರ್ಮರ್ ನಿರ್ವಹಣೆ: ಬೆಸ್ಕಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದುರಸ್ತಿ ಸ್ಥಿತಿಯಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗಳನ್ನು ಸರಿಪಡಿಸುವ ಕಾರ್ಯ ಮುಂದುವರಿಸಲಾಗಿದೆ. ಕಳೆದ ಎರಡು ತಿಂಗಳಿಂದೀಚೆಗೆ ಎಂಟು ಜಿಲ್ಲೆಗಳಲ್ಲಿನ 27,787 ಟ್ರಾನ್ಸ್‌ಫಾರ್ಮರ್‌ಗಳನ್ನು ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ನ್ಯೂನತೆಗಳಿರುವ ಹಾಗೂ ಅಸಮರ್ಪಕ ಗ್ರೌಂಡಿಂಗ್‌ ಸಮಸ್ಯೆ ಹೊಂದಿರುವ ಟ್ರಾನ್ಸ್‌ಫಾರ್ಮರ್‌ಗ‌ಳನ್ನು ನಿರ್ವಹಣೆ ಮಾಡಲಾಗಿದೆ.

ಮೇ 5ರಂದು ಟ್ರಾನ್ಸ್‌ಫಾರ್ಮರ್‌ ಅಭಿಯಾನಕ್ಕೆ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಚಾಲನೆ ನೀಡಿದ್ದರು. ರಾಜ್ಯದಾದ್ಯಂತ ಎರಡು ಲಕ್ಷಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯ ಗುರಿಯನ್ನು ಎಲ್ಲಾ ಎಸ್ಕಾಂಗಳಿಗೆ ನೀಡಲಾಗಿತ್ತು.

ತಾಂತ್ರಿಕ ಸಮಸ್ಯೆ ಇರುವ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಸಮಗ್ರ ನಿರ್ವಹಣೆಯನ್ನು ಕೈಗೊಳ್ಳಲಾಗಿದೆ.

ಮೇ 5ರಿಂದ ಜುಲೈ 12ರ ವರೆಗೆ ನಿರ್ವಹಣೆ ಮಾಡಿರುವ 27,787 ಟ್ರಾನ್ಸ್‌ಫಾರ್ಮರ್‌ಗಳನ್ನು ಗಳಲ್ಲಿ ಬೆಂಗಳೂರು ನಗರ ಜಿಲ್ಲೆಯವೇ 9,524 ಟ್ರಾನ್ಸ್‌ಫಾರ್ಮರ್‌ಗಳಿವೆ. ತುಮಕೂರು ಜಿಲ್ಲೆಯಲ್ಲಿ 5,232, ದಾವಣಗೆರೆಯಲ್ಲಿ 2,906, ಚಿತ್ರದುರ್ಗದಲ್ಲಿ 2,291, ಚಿಕ್ಕಬಳ್ಳಾಪುರದಲ್ಲಿ 2,646, ರಾಮನಗರದಲ್ಲಿ 2,372 ಮತ್ತು ಕೋಲಾರದಲ್ಲಿ 1,429 ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯನ್ನು ಬೆಸ್ಕಾಂ ಪೂರ್ಣಗೊಳಿಸಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು