ಮಂಗಳವಾರ, ಸೆಪ್ಟೆಂಬರ್ 21, 2021
21 °C
ವಿಮರ್ಶಕ ಎಚ್. ದಂಡಪ್ಪ ಅಭಿಮತ

‘ಪರಂಪರೆಯ ಪ್ರತಿರೋಧದಿಂದಲೇ ಸಾಹಿತ್ಯ ಚಳವಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಈಗಿನ ಬರಹಗಾರರು ಪರಂಪರೆಯನ್ನು ಅರಿತುಕೊಂಡು ಸಾಹಿತ್ಯ ಸೃಷ್ಟಿಸಬೇಕು. ಪರಂಪರೆಯ ಪ್ರತಿರೋಧದಿಂದಲೇ ಸಾಹಿತ್ಯ ಚಳವಳಿ ಹುಟ್ಟಿರುವುದು’ ಎಂದು ವಿಮರ್ಶಕ ಎಚ್. ದಂಡಪ್ಪ ತಿಳಿಸಿದರು.

ಬಿಎಂಶ್ರೀ ಪ್ರತಿಷ್ಠಾನವು ರುಕ್ಮಿಣಮ್ಮ ಸೀತಾರಾಮರಾವ್ ದತ್ತಿ ಕಾರ್ಯಕ್ರಮದ ಪ್ರಯುಕ್ತ ‌‘ಕನ್ನಡದ ಸಾಹಿತ್ಯದಲ್ಲಿ ಪರಂಪರೆ ಮತ್ತು ಪ್ರತಿಭಟನೆ’ ಎಂಬ ವಿಷಯದ ಮೇಲೆ ಆನ್‌ಲೈನ್ ವೇದಿಕೆಯಲ್ಲಿ ಮಂಗಳವಾರ ಆಯೋಜಿಸಿದ ಉಪನ್ಯಾಸದಲ್ಲಿ ಮಾತನಾಡಿದರು. 

‘ಮುನುಷ್ಯ ಕೇಂದ್ರಿತ ವಿಚಾರಗಳು ಪರಂಪರೆಯಾಗಿ ಬೆಳೆಯುತ್ತಾ ಬಂದಿದೆ. ಆದರೆ, ಅದು ಪ್ರತಿರೋಧಗಳಿಂದ ಹೊಸ ಹೊಸ ರೂಪಗಳನ್ನು ಪಡೆದಿದೆ. ಪರಂಪರೆ ಎನ್ನುವುದು ಒಂದು ಕಡೆಯಿಂದ ಮತ್ತೊಂದು ಕಡೆ ನಿರಂತರ ಚಲನಶೀಲತೆಯಿಂದ ಕೂಡಿರುತ್ತದೆ. ಸಂಪ್ರದಾಯವು ಜಡತ್ವವನ್ನು ಹೊಂದಿರುತ್ತದೆ. ಸಾಹಿತ್ಯವೂ ಒಂದು ಪರಂಪರೆ
ಯಾಗಿ ಉಳಿದುಕೊಂಡು ಬಂದಿದೆ’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಆರ್. ಲಕ್ಷ್ಮೀನಾರಾಯಣ, ಗೌರವ ಕಾರ್ಯದರ್ಶಿ ಬಿ.ಸಿ. ರಾಜಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು