ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಸ್ತಕದ ಮೊದಲ ಮುದ್ರಣ ಈಗಲೂ ಸಾವಿರ’

ಕವಿ ಜಯಂತ ಕಾಯ್ಕಿಣಿ ಬೇಸರ
Last Updated 28 ಮಾರ್ಚ್ 2021, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ಆರು ಕೋಟಿ ಕನ್ನಡಿಗರಿದ್ದೇವೆ. ಆದರೆ,90ರ ದಶಕದಿಂದ ಈವರೆಗೂ ಯಾವುದೇ ಒಂದು ಪುಸ್ತಕದ ಪ್ರಥಮ ಮುದ್ರಣ ಒಂದು ಸಾವಿರ ಮಾತ್ರ.ಪುಸ್ತಕಗಳ ದರ ಕಡಿಮೆ ಇದ್ದರೂ ಕೊಂಡುಕೊಳ್ಳುವವರು ಕಡಿಮೆ’ ಎಂದು ಕವಿ ಜಯಂತ ಕಾಯ್ಕಿಣಿ ಬೇಸರ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಪ್ರಕಾಶನವು ಬುಕ್‌ಬ್ರಹ್ಮ ಸಹಯೋಗದಲ್ಲಿ ಆನ್‌ಲೈನ್‌ ಮೂಲಕ ಭಾನುವಾರ ಆಯೋಜಿಸಿದ್ದ ಜಯಂತ ಕಾಯ್ಕಿಣಿ ಅವರ ‘ವಿಚಿತ್ರಸೇನನ ವೈಖರಿ’ ಹಾಗೂ ಅನಾರ್ಕಲಿಯ ಸೇಫ್ಟಿ ಪಿನ್’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುಸ್ತಕಗಳು ಆಗಿನ ಕಾಲದಲ್ಲಿ ಮೊಳೆ ಜೋಡಿಸುವ ವಿಧಾನದಿಂದ ಮುದ್ರಣವಾಗುತ್ತಿದ್ದವು. ಈಗ ತಂತ್ರಜ್ಞಾನಗಳ ಸಹಾಯದಿಂದ ವೇಗವಾಗಿ ಮುದ್ರಣ ನಡೆಯುತ್ತದೆ. ಆದರೂ ಪುಸ್ತಕಗಳ ಮೊದಲ ಮುದ್ರಣದ ಮಿತಿ ಅಷ್ಟೇ ಇದೆ. ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಬೇಕು’ಎಂದರು.

‘ಸಾಮಾನ್ಯವಾಗಿ ₹100ಕ್ಕಿಂತ ಹೆಚ್ಚಿನ ದರ ಇರುವ ಪುಸ್ತಕದ ಖರೀದಿಗೆ ಹಿಂದೇಟು ಹಾಕುತ್ತಾರೆ. ಈ ಭಾವನೆ ಯಾಕೆಂದು ಅರ್ಥವಾಗುತ್ತಿಲ್ಲ. ಒಂದು ವೇಳೆ ಪುಸ್ತಕವನ್ನು ಓದಿದ ನಂತರ ಅದನ್ನು ತಿನ್ನಬಹುದು ಎಂದು ವಿಜ್ಞಾನದಿಂದ ಆವಿಷ್ಕಾರ ನಡೆದರೆ , ಪುಸ್ತಕದ ದರ ಹೆಚ್ಚಿಸಬಹುದೇನೋ’ ಎಂದು ಹಾಸ್ಯ ಮಾಡಿದರು.

ಬರಹಗಾರ ಎಸ್‌.ದಿವಾಕರ್,‘ಜಯಂತ್ ಕಾಯ್ಕಿಣಿ ಅವರ ಪ್ರತಿಯೊಂದು ಉಪಮಾನವೂ ಒಂದು ರೂಪಕವಾಗಿರುತ್ತದೆ. ಸಾಹಿತ್ಯದಲ್ಲಿಜಯಂತ್ ಅವರಂತೆ ರೂಪಕಗಳು ಬಂದಿರುವುದನ್ನು ನಾನುಬೇರೆಡೆ ಕಂಡಿಲ್ಲ. ಅವರ ಪ್ರತಿ ಕಥೆಯೂ ಓದುಗನ ಅನುಭವಕ್ಕೆ ಬರುವಂತಿವೆ ಹಾಗೂ ಪಂಚೇಂದ್ರಿಯಗಳನ್ನು ಎಚ್ಚರಿಸುವಂತಿರುತ್ತವೆ’ ಎಂದರು.

‘ಕಳಪೆ ಕಥೆಗಾರರು ಕಥೆಗಳ ವಿಷಯ ಸೂಚಿಸುತ್ತಾರೆ. ಅದು, ಜಯಂತರ ಕಥೆಗಳಲ್ಲಿ ಇರುವುದಿಲ್ಲ. ಅವರ ಪ್ರತಿ ಕಥೆಯನ್ನು ಓದಿದಾಗಲೂ ಕಾದಂಬರಿ ಓದಿದಂತೆ ಆಗುತ್ತದೆ. ಅವರು ನೀಡುವ ವಿವರಣೆಯಲ್ಲಿ ಪರಿಪೂರ್ಣತೆ ಇರುತ್ತದೆ. ಅವರ ಕಥೆಗಳಲ್ಲಿನ ವಿಷಯವನ್ನು ನಾವೂ ನೋಡಿರುತ್ತೇವೆ. ಆದರೆ, ಅದನ್ನು ಹೇಗೆ ನೋಡಬೇಕು ಎಂದು ಜಯಂತರ ಕಥೆಗಳೇ ಹೇಳುತ್ತವೆ’ ಎಂದು ವಿವರಿಸಿದರು.

ಜಯಂತ ಕಾಯ್ಕಿಣಿ ಅವರ ಪುಸ್ತಕಗಳನ್ನು ಕುರಿತು ವಿಜ್ಞಾನ ವಿದ್ವಾಂಸ ಸುಂದರ ಸರುಕ್ಕೈ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT