ಬೆಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯಕ್ರಮವನ್ನೇ ಸಿಬಿಎಸ್ಇ 10 ಮತ್ತು 9ನೇ ತರಗತಿಗಳಿಗೆ ಕನ್ನಡ ವಿಷಯದ ಪಠ್ಯವಾಗಿ ಉಳಿಸಿಕೊಂಡಿದೆ.

ಕೇಂದ್ರ ಸರ್ಕಾರದ ಅಂಗಸಂಸ್ಥೆಯಾಗಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಈ ಪಠ್ಯ ಅಳವಡಿಸಿಕೊಂಡಿದೆ. ಆದರೆ ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ನೇಮಿಸಿದ ಸಮಿತಿಯು ಇದೇ ಪಠ್ಯದಲ್ಲಿನ ಹಲವು ಅಧ್ಯಾಯಗಳನ್ನು ಕೈಬಿಡಲು ಶಿಫಾರಸು ಮಾಡಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

10ನೇ ತರಗತಿ ಕನ್ನಡ ಪಠ್ಯದಿಂದ ಎ.ಎನ್.ಮೂರ್ತಿರಾಯರು ಮತ್ತು ಪಿ.ಲಂಕೇಶ್ ಸೇರಿದಂತೆ ಹಲವು ಲೇಖಕರ ಪಾಠಗಳನ್ನು ಕೈಬಿಡಲು ಶಿಫಾರಸು ಮಾಡಲಾಗಿದೆ. ಆದರೆ, ಸಿಬಿಎಸ್ಇ ಶಾಲೆಗಳಿಗೆ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಿಸಿದ್ದ ಪುಸ್ತಕವನ್ನೇ ಕನ್ನಡ ದ್ವಿತೀಯ ಭಾಷೆಯ ಪಠ್ಯವಾಗಿ ಅಳವಡಿಸಲಾಗಿದೆ.

10ನೇ ತರಗತಿಗೆ ಕರ್ನಾಟಕ ಪಠ್ಯ ಪುಸ್ತಕ ಸಂಘ ಪ್ರಕಟಿಸಿರುವ ಸಿರಿ ಕನ್ನಡ ಪುಸ್ತಕವನ್ನೇ ಅಧ್ಯಯನ ಮಾಡಲು ಸೂಚಿಸಲಾಗಿದೆ. ಈ ಪಠ್ಯದಲ್ಲಿನ ಐದು ಪಠ್ಯಗಳನ್ನು ಬೋಧನೆ ಮಾಡಲು ತಲಾ ಐದು ಅವಧಿಗಳನ್ನು ನಿಗದಿಪಡಿಸಲಾಗಿದೆ.

ಸಾರಾ ಅಬೂಬಕ್ಕರ್ ಅವರ ‘ಯುದ್ಧ’ ಮತ್ತು ಎ.ಎನ್.ಮೂರ್ತಿರಾಯರ ‘ವ್ಯಾಘ್ರಗೀತೆ’, ಪಿ.ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ಜಿ.ರಾಮಕೃಷ್ಣ ಅವರ ‘ಭಗತ್ ಸಿಂಗ್’ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಗಳು ಕುರಿತಾದ ಪಾಠಗಳನ್ನು ಸಿಬಿಎಸ್ಇ ಪಠ್ಯದಲ್ಲಿ ಅಳವಡಿಸಲಾಗಿದೆ. ಈ ಎಲ್ಲ ಪಠ್ಯಗಳನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಕೈಬಿಟ್ಟಿದೆ.

9ನೇ ತರಗತಿ ಪಠ್ಯದಲ್ಲೂ ಇದೇ ರೀತಿಯಾಗಿದೆ. ರಾಜ್ಯ ಸರ್ಕಾರ ಕೈಬಿಟ್ಟಿರುವ ವಿಷಯಗಳನ್ನೇ ಕೇಂದ್ರದ ಪಠ್ಯಗಳಲ್ಲಿ ಅಳವಡಿಸಲಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಿಸಿದ್ದ ಪಠ್ಯವನ್ನೇ ಅಧ್ಯಯನಕ್ಕೆ ಸ್ವೀಕರಿಸಲಾಗಿದೆ.

ಮುಖ್ಯವಾಗಿ ಗಾಂಧಿವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಕನ್ನಡ ಮೌಲ್ವಿ’ ಅಧ್ಯಾಯವನ್ನೇ ರೋಹಿತ್ ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ. ಆದರೆ, ಇದೇ ಅಧ್ಯಾಯವನ್ನು ಸಿಬಿಎಸ್ಇ ಪಠ್ಯದಲ್ಲಿ ಅಳವಡಿಸಲಾಗಿದೆ.

ರೋಹಿತ್ ಚಕ್ರತೀರ್ಥ ಸಮಿತಿ ಕೈಬಿಟ್ಟಿರುವ ಅರವಿಂದ ಮಾಲಗತ್ತಿ ಅವರ ‘ಮರಳಿ ಮನೆಗೆ’ ಅಧ್ಯಾಯ ಹಾಗೂ ಪಠ್ಯ ಪೂರಕ ಅಧ್ಯಯನ ವಿಭಾಗದಲ್ಲಿದ್ದ ಕೆ.ನೀಲಾ ಅವರ ‘ರಂಜಾನ್ ಸುರಕುಂಬಾ’ ಪಠ್ಯ ಕೂಡಾ ಸಿಬಿಎಸ್ಇ ಪಠ್ಯಕ್ರಮದಲ್ಲಿದೆ.

ವಿಧಾನವೇ ಗೊತ್ತಿಲ್ಲ: ‘ಈಗಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಯಾವುದೇ ಉದ್ದೇಶವೂ ಇಲ್ಲ, ವಿಧಾನವೂ ಇಲ್ಲ, ಚೌಕಟ್ಟು ಸಹ ಇಲ್ಲ. ಸಮಿತಿಯು ಸಮರ್ಪಕವಾದ ವಿಧಾನ ಅನುಸರಿಸಿಲ್ಲ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅಭಿಪ್ರಾಯಪಟ್ಟಿದ್ದಾರೆ.

ಧರ್ಮಗಳ ವಿಷಯಕ್ಕೆ ಕತ್ತರಿ:ಪಠ್ಯಗಳಲ್ಲಿ ಬೌದ್ಧ ಮತ್ತು ಜೈನ ಧರ್ಮದ ಪೂರ್ಣ ವಿಷಯಕ್ಕೆ ರೋಹಿತ್ ಚಕ್ರತೀರ್ಥ ಸಮಿತಿ ಕತ್ತರಿ ಹಾಕಿರುವುದು ಅಚ್ಚರಿ ಮೂಡಿಸಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಪಾಠದಲ್ಲಿ ಬೌದ್ಧ ಮತ್ತು ಜೈನ ಧರ್ಮ ಕುರಿತು ವಿವರಗಳಿದ್ದವು. ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು ಪ್ರಕಾರ ಮುಖ್ಯ ವಿಷಯಗಳನ್ನು ಮುಂದಿನ ತರಗತಿಗಳಲ್ಲಿ ಇನ್ನಷ್ಟು ವಿಸ್ತರಿಸಬೇಕು. ಇದನ್ನು ‘ಸುರಳಿ ಪದ್ಧತಿ’ ಎನ್ನುತ್ತಾರೆ. ಇದಕ್ಕೆ ಅನುಗುಣವಾಗಿ 8ನೇ ತರಗತಿಯಲ್ಲಿ ಮತ್ತಷ್ಟು ವಿಸ್ತರಿಸಿ ಬುದ್ಧ, ಮಹಾವೀರ ಮತ್ತು ಅವರ ಧರ್ಮಗಳ ಬಗ್ಗೆ ಪಾಠ ಅಳವಡಿಸಲಾಗಿತ್ತು' ಎಂದು ವಿವರಿಸಿದ್ದಾರೆ.

‘ಆದರೆ, 6ನೇ ತರಗತಿ ಪಠ್ಯದಲ್ಲಿ ಯಾಗಾದಿಗಳಿಗೆ ಆಹಾರ ಪೋಲಾಗಿ ಅಭಾವ ಉಂಟಾದ ಅಂಶವನ್ನು ಬೋಧಿಸಬಾರದು ಎಂದು ಹಿಂದೆಯೇ ಸರ್ಕಾರ ಸೂಚಿಸಿತ್ತು. ಮರು ಪರಿಷ್ಕರಣೆ ಮಾಡುವಾಗ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಅಷ್ಟನ್ನು ಮಾತ್ರ ತೆಗೆಯುವ ಬದಲು ಬೌದ್ಧ ಮತ್ತು ಜೈನ ಧರ್ಮದ ಪೂರ್ಣ ವಿಷಯಕ್ಕೆ ಕತ್ತರಿ ಹಾಕಿದೆ. ಇದು ಸುರಳಿ ಪದ್ಧತಿಗೂ ವಿರುದ್ಧ. ಆ ಧರ್ಮಗಳಿಗೂ ಅನ್ಯಾಯ ಮಾಡಿದಂತಾಗಿದೆ’ ಎನ್ನುವುದು ತಜ್ಞರು ಪ್ರತಿಪಾದಿಸಿದ್ದಾರೆ.

‘ಪಠ್ಯ ಪರಿಷ್ಕರಣೆ ಸಮಿತಿ ಸ್ವಾಯತ್ತ ಸಂಸ್ಥೆಯಾಗಲಿ’
ದಾವಣಗೆರೆ: ‘ಬಿಜೆಪಿ ಸರ್ಕಾರ ತನ್ನ ಕೇಸರೀಕರಣದ ಅಜೆಂಡಾದ ಭಾಗವಾಗಿ ಶಿಕ್ಷಣ ಕ್ಷೇತ್ರವನ್ನೂ ಕೆಡಿಸಲು ಶುರುಮಾಡಿದೆ. ಸದ್ಯದ ಪಠ್ಯಪುಸ್ತಕ ಪುನರ್ರಚನೆ ಇಂಥ ಒಂದು ಧೂರ್ತ, ಅನೈತಿಕ ಹೆಜ್ಜೆಯಾಗಿದ್ದು, ಇದನ್ನು ಖಂಡಿಸುತ್ತೇವೆ. ಶಿಕ್ಷಣದ ಹೃದಯವಾಗಿರುವ ಪಠ್ಯಕ್ರಮ ರಚನೆಯನ್ನು ನಾಡಿನ ಮಾನ್ಯತೆ ಪಡೆದ, ಅನುಭವಿ ತಜ್ಞರು ನಿರ್ವಹಿಸಬೇಕು ಮತ್ತು ಭವಿಷ್ಯದ ದೃಷ್ಟಿಯಿಂದ ಈ ಪ್ರಕ್ರಿಯೆಗೆ ಸ್ವಾಯತ್ತ ಸಾಂಸ್ಥಿಕ ಸ್ವರೂಪವನ್ನು ನೀಡಬೇಕು’ ಎಂಬ ನಿರ್ಣಯವನ್ನು ದಾವಣಗೆರೆಯಲ್ಲಿ ಶುಕ್ರವಾರ ಆರಂಭಗೊಂಡ 8ನೇ ಮೇ ಸಾಹಿತ್ಯ ಮೇಳದಲ್ಲಿ ತೆಗೆದುಕೊಳ್ಳಲಾಯಿತು.

ನಿಜವಾದ ಚರಿತ್ರೆಯನ್ನು ದೇಶದ ದುಡಿಯುವ ವರ್ಗಗಳು ಮತ್ತು ದ್ರಾವಿಡರು ಅರಿತುಕೊಂಡರೆ ಏನಾಗಬಹುದು ಎನ್ನುವುದು ಆರೆಸ್ಸೆಸ್ನವರಿಗೆ ಗೊತ್ತಿದೆ. ಹಾಗಾಗಿಯೇ ಇತಿಹಾಸವನ್ನು ತಿರುಚುತ್ತಾರೆ.
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ರೋಹಿತ್ ಚಕ್ರತೀರ್ಥ ನಮ್ಮ ಕನ್ನಡದ ಬಾವುಟವನ್ನು ಒಳ ಉಡುಪಿಗೆ ಹೋಲಿಕೆ ಮಾಡಿ ಅವಹೇಳನ ಮಾಡಿದ. ಆತನಿಗೆ ಪಠ್ಯಪುಸ್ತಕ ಪರಿಷ್ಕಸಿರುವ ಹೊಣೆಯನ್ನು ಸರ್ಕಾರ ನೀಡಿತು. ಎಲ್ಲ ಸಂಘಟನೆಗಳು ಆತನ ವಿರುದ್ಧ ಹೋರಾಟ ಮಾಡಬೇಕು.
–ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.