ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಲ ಚಳಿಯ ತೀವ್ರತೆ ಕಡಿಮೆ: ಕೃಷಿ ಹವಾಮಾನ ವಿಜ್ಞಾನಿ ಎಂ.ಬಿ.ರಾಜೇಗೌಡ

Last Updated 7 ಡಿಸೆಂಬರ್ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ವರ್ಷದ ಹವಾಮಾನ ಸ್ಥಿತಿಗಳ ಏರುಪೇರಿನಿಂದಾಗಿ ರಾಜ್ಯದಲ್ಲಿ ಈ ಬಾರಿ ಚಳಿಯ ತೀವ್ರತೆ ಹಾಗೂ ಚಳಿಯ ಅವಧಿ ಕಡಿಮೆ ಇರಲಿದೆ’ ಎಂದುಕೃಷಿ ಹವಾಮಾನ ವಿಜ್ಞಾನಿ
ಎಂ.ಬಿ.ರಾಜೇಗೌಡ ತಿಳಿಸಿದರು.

‘ರಾಜ್ಯದಲ್ಲಿ ಈ ವರ್ಷದ ಹವಾಮಾನ ಪರಿಸ್ಥಿತಿ ಸಾಮಾನ್ಯ ವರ್ಷಗಳಿಗಿಂತ ಭಿನ್ನ
ವಾಗಿದೆ. ಅ.25ರಂದು ಮುಂಗಾರು ಕೊನೆಗೊಂಡಿದ್ದು, ಹಿಂಗಾರು ಆರಂಭಗೊಂಡಿತು. ಇದರಿಂದ ಚಳಿಗಾಲದ ಆರಂಭ ಸುಮಾರು 20 ದಿನಗಳವರೆಗೆ ಮುಂದಕ್ಕೆ ಹೋಯಿತು’ ಎಂದರು.

‘ಡಿಸೆಂಬರ್ ಮೊದಲ ವಾರ ವಾತಾವರಣದಲ್ಲಿ ತಾಪಮಾನ ಇಳಿಕೆ ಆರಂಭವಾಯಿತು. ಇದಕ್ಕೂ ಮುನ್ನ ಸಾಗರದಲ್ಲಿ ಉದ್ಭವಗೊಂಡ ದಟ್ಟವಾದ ಮೋಡಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಸಿದವು. ಈ ಅವಧಿಯಲ್ಲಿ ಈಶಾನ್ಯ ದಿಕ್ಕಿನ ತಂಗಾಳಿಯ ಪ್ರಭಾವವೂ ತಗ್ಗಿ, ರಾಜ್ಯದಲ್ಲಿ ತಾಪಮಾನ ಏರಿಕೆ ಇರಲಿಲ್ಲ. ಡಿ.21ರವರೆಗೆ ಇದೇ ಸ್ಥಿತಿ ಮುಂದುವರಿಯಲಿದ್ದು, ನಂತರ ತಾಪಮಾನ ಏರಲಿದೆ’ ಎಂದು ವಿವರಿಸಿದರು.

‘ಈ ವರ್ಷ ತಾಪಮಾನ ಇಳಿಕೆಯ ಅವಧಿ ಕೇವಲ 18 ದಿನಗಳು. ಇದರಿಂದ ಬಹುತೇಕ ಪ್ರದೇಶಗಳಲ್ಲಿ ತಾಪಮಾನದ ತೀವ್ರತೆ ತನ್ನಕನಿಷ್ಠ ಹಾಗೂ ಗರಿಷ್ಠ ಮಟ್ಟ ತಲುಪುವುದಿಲ್ಲ. ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ ಚಳಿಯ ತೀವ್ರತೆ ಕಡಿಮೆ ಇರಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT