ಚಿಕ್ಕಬಳ್ಳಾಫುರ: ತಾಲ್ಲೂಕಿನ ಹಿರೇನಾಗವಲ್ಲಿ ಬಳಿ ಅಕ್ರಮ ಕಲ್ಲು ಕ್ವಾರಿ ಸ್ಪೋಟ ದುರಂತ ಪ್ರಕರಣ ಸಂಬಂಧ ಸ್ಪೋಟದ ತೀವ್ರತೆಗೆ ಟಾಟಾ ಏಸ್ ವಾಹನ, ಬೈಕ್ ಸಂಪೂರ್ಣ ಛಿದ್ರವಾಗಿದೆ.

ಬ್ರಮರವಾಸಿನಿ ಕ್ರಷರ್ ಆಂಡ್ ಕ್ವಾರಿಗೆ ಸೇರಿದ ವಾಹನವಾಗಿದ್ದು, ಚಾಲಕ ರಿಯಾಜ್ ಪವಾಡ ಸದೃಶವಾಗಿ ಬದುಕುಳಿದಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ರಿಯಾಜ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಬ್ರಮರವಾಸಿನಿ ಕಲ್ಲು ಕ್ವಾರಿಯಲ್ಲಿ ಸ್ಫೋಟಕ್ಕೆ ಅನುಮತಿ ನೀಡಿಲ್ಲ. ಆದರೆ, ಅಕ್ರಮವಾಗಿ ಸ್ಫೋಟ ಮಾಡಿದ್ದಾರೆ. ಈ ಹಿಂದೆ ಕ್ವಾರಿ ಹಾಗೂ ಕ್ರಷರ್ ಮೇಲೆ ದಾಳಿ ಮಾಡಲಾಗಿತ್ತು. ದಾಳಿ ವೇಳೆ ಬಳಸಿದ್ದ ಕಂಪ್ರೇಸರ್ ಜಪ್ತಿ ಮಾಡಲಾಗಿತ್ತು. ಪೊಲೀಸರ ಕಣ್ಣು ತಪ್ಪಿಸಲು ಜಿಲೇಟಿನ್ ಕಡ್ಡಿಗಳನ್ನು ಬಚ್ಚಿಟ್ಟಿದ್ದರು. ಬಚ್ಚಿಟ್ಟಿದ್ದ ಕಡ್ಡಿಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಘಟನೆ ನಡೆದಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.