ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಹಂಪಿ, ಸ್ವಚ್ಛ ತುಂಗಭದ್ರಾ: ಸಂಘಟನೆಗಳಿಂದ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ

Last Updated 20 ಸೆಪ್ಟೆಂಬರ್ 2020, 7:03 IST
ಅಕ್ಷರ ಗಾತ್ರ

ಹೊಸಪೇಟೆ: ‘ಸ್ವಚ್ಛ ಹಂಪಿ, ಸ್ವಚ್ಛ ತುಂಗಭದ್ರಾ’ ಅಭಿಯಾನದ ಪ್ರಯುಕ್ತ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾನುವಾರ ತಾಲ್ಲೂಕಿನ ಹಂಪಿಗೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿ ತಟ ಹಾಗೂ ಸ್ನಾನಘಟ್ಟ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಹಂಪಿ ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ನದಿಯಲ್ಲಿನ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ತೆಗೆಯುವುದರ ಮೂಲಕ ಚಾಲನೆ ನೀಡಿದರು.

ಬಳಿಕ ನದಿಯಲ್ಲಿ ಬಿದ್ದಿದ್ದ ಬಟ್ಟೆ, ಪ್ಲಾಸ್ಟಿಕ್‌ ವಸ್ತುಗಳನ್ನು ತೆಗೆದರು. ನದಿ ತಟದಲ್ಲಿ ಬೆಳೆದಿದ್ದ ಕಳೆ ತೆಗೆದು ಸ್ವಚ್ಛಗೊಳಿಸಿದರು.

ಸೇನೆಯ ಅಧ್ಯಕ್ಷ ವಿಶ್ವನಾಥ ಮಾಳಗಿ, ಯುವ ಬ್ರಿಗೇಡ್‌ನ ಎಸ್‌.ಎಸ್‌. ರಾಚಯ್ಯ, ಮಂಜುನಾಥ ಕಣವಿಹಳ್ಳಿ, ಈರಣ್ಣ ಪೂಜಾರಿ, ಫಕ್ರುದ್ದೀನ್, ಹುಲುಗಪ್ಪ, ಗೋಪಾಲ್, ಮಲ್ಲಿಕಾರ್ಜುನ ಮಠದ್, ಲೋಕಾಭಿರಾಮ, ಭೀಮಯ್ಯ ಜೋಗದ, ಅನೂಪ್ ಶಿವಾನಂದ, ತೇಜಮೂರ್ತಿ, ಕುಮಾರ್ ರಾಚಯ್ಯ, ಹಂಪಿಯ ರಂಜಾನ್ ‘ಬಿ’ ಯೋಗಾಟ್ರಸ್ಟ್, ಹಂಪಿ ಟಾಸ್ಕ್ ಫೋರ್ಸ್‌, ಹಂಪಿ ಹವ್ಯಾಸಿ ಛಾಯಾಗ್ರಾಹಕರ ಸಂಘ, ಹಂಪಿಯ ಪ್ರವಾಸಿ ಮಾರ್ಗದರ್ಶಿ ಸಂಘ, ಹಂಪಿ ಫಿಲ್ಮ್ ಫೌಂಡೇಷನ್, ಬಳ್ಳಾರಿಯ ವಿಜಯೇಂದ್ರ ಯುಡಿಯೂರಪ್ಪ ಬಳಗದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT