ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್ ಕೆ: ಹೊರರಾಜ್ಯದ ವಿದ್ಯಾರ್ಥಿಗಳ ಪ್ರಾಬಲ್ಯ

ಸಿಇಟಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದ ರಕ್ಷಿತ್‌ಗೆ ಕಾಮೆಡ್‌–ಕೆ ನಲ್ಲೂ ಅಗ್ರಸ್ಥಾನ
Last Updated 4 ಸೆಪ್ಟೆಂಬರ್ 2020, 16:32 IST
ಅಕ್ಷರ ಗಾತ್ರ

ಬೆಂಗಳೂರು: ಕಾಮೆಡ್‌–ಕೆ ಯುಜಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೊದಲ ಹತ್ತು ರ‍್ಯಾಂಕ್‌ ಪಡೆದವರಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಇದ್ದಾರೆ.

ರಾಜ್ಯದ ಶೇ 37ರಷ್ಟು ವಿದ್ಯಾರ್ಥಿಗಳು ಮಾತ್ರ ಎಂಜಿನಿಯರಿಂಗ್ ಅಥವಾ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದರೆ, ಅದೇ ಹೊರರಾಜ್ಯದ ವಿದ್ಯಾರ್ಥಿಗಳ ಪ್ರಮಾಣ ಶೆ 63ರಷ್ಟಿದೆ. ಮೊದಲ 1000 ರ‍್ಯಾಂಕ್‌ಗಳಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳು 654 ಇದ್ದರೆ, ರಾಜ್ಯದವರು 356 ಮಾತ್ರ. ಮೊದಲ 100 ರ‍್ಯಾಂಕಿಂಗ್‌ನಲ್ಲಿ ರಾಜ್ಯದ 45 ವಿದ್ಯಾರ್ಥಿಗಳು ಮಾತ್ರ ಪಾಲು ಪಡೆದಿದ್ದಾರೆ.

ಕಳೆದ ಕೆಸಿಇಟಿಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದ ಎಂ. ರಕ್ಷಿತ್, ಈ ಪರೀಕ್ಷೆಯಲ್ಲಿಯೂ ಮೊದಲ ರ‍್ಯಾಂಕ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದ ರಕ್ಷಿತ್, ಕಾಮೆಡ್‌–ಕೆ ಯುಜಿಇಟಿಯಲ್ಲಿ 180ಕ್ಕೆ 168 ಅಂಕಗಳನ್ನು ಗಳಿಸಿದ್ದಾರೆ. ಬೆಂಗಳೂರಿನ ಶದನ್‌ ಹುಸೇನ್ 7ನೇ ರ‍್ಯಾಂಕ್‌ ಪಡೆದಿದ್ದಾರೆ.

‘ಈಗ ಜೆಇಇ ಮುಖ್ಯಪರೀಕ್ಷೆ ಬರೆಯುತ್ತಿದ್ದೇನೆ. ಅಲ್ಲದೆ, ಪಿಇಎಸ್‌ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯ ಫಲಿತಾಂಶ ಎದುರು ನೋಡುತ್ತಿದ್ದೇನೆ.ಜೆಇಇ ಮೇನ್ಸ್‌ ಫಲಿತಾಂಶ ಬಂದ ನಂತರ ಯಾವ ಕೋರ್ಸ್‌ ಅಥವಾ ಕಾಲೇಜು ಆಯ್ಕೆಮಾಡಿಕೊಳ್ಳಬೇಕು ಎಂಬ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ರಕ್ಷಿತ್‌ ಹೇಳುತ್ತಾರೆ.

ಆನ್‌ಲೈನ್‌ನಲ್ಲೇ ಕೌನ್ಸೆಲಿಂಗ್

ಕೋವಿಡ್‌ ಕಾರಣದಿಂದ ಈ ಬಾರಿ ಆನ್‌ಲೈನ್‌ನಲ್ಲಿಯೇ ಕೌನ್ಸೆಲಿಂಗ್‌ ನಡೆಸಲು ಕಾಮೆಡ್‌–ಕೆ ಮುಂದಾಗಿದೆ. ಅರ್ಜಿ ಸಂಖ್ಯೆಯನ್ನು ನಮೂದಿಸಿ, ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳ ಸ್ಕ್ಯಾನ್‌ ಕಾಪಿಯನ್ನು ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ತಜ್ಞರ ಸಮಿತಿಯು ಈ ದಾಖಲೆಗಳನ್ನು ಪರಿಶೀಲಿಸುತ್ತದೆ. ರಾಜ್ಯದ 192 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಈ ರ‍್ಯಾಂಕಿಂಗ್‌ ಆಧಾರದಲ್ಲಿ ಪ್ರವೇಶಗಳನ್ನು ನೀಡಲಾಗುತ್ತದೆ.

www.comedk.org ವೆಬ್‌ಸೈಟ್‌ನಲ್ಲಿ ಕಾಮೆಡ್‌–ಕೆ ಪರೀಕ್ಷೆಯ ಅಂಕಪಟ್ಟಿಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಅರ್ಜಿ ಸಂಖ್ಯೆ ನಮೂದಿಸಿ ವಿದ್ಯಾರ್ಥಿಗಳು ರ‍್ಯಾಂಕ್‌ಗಳ ಪ್ರಮಾಣ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT