ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸ ಕುರ್ಚಿ ಸರ್ಕಸ್ಸಿಗೆ ಹೊರತು ರಾಜ್ಯದ ಹಿತಕ್ಕಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದೇ ತಿಂಗಳ ಅಧಿಕಾರದ ಅವಧಿಯಲ್ಲಿ ಹಲವು ಬಾರಿ ದೆಹಲಿಗೆ ಹಾರಿದ್ದಾರೆ. ಹೋದಾಗಲೆಲ್ಲ ಲಸಿಕೆಗೆ, ಜಿಎಸ್‌ಟಿ ಬಾಕಿಗೆ ಮನವಿ ಮಾಡಿದ್ದೇನೆ. ನೆರೆ ಪರಿಹಾರ ಕೇಳಿದ್ದೇನೆ ಎನ್ನುತ್ತಾರೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಅವರ ದೆಹಲಿ ಪ್ರವಾಸ ಕುರ್ಚಿ ಸರ್ಕಸ್ಸಿಗೆ ಹೊರತು ರಾಜ್ಯದ ಹಿತಕ್ಕಲ್ಲ ಎಂಬುದು ಸ್ಪಷ್ಟ' ಎಂದು ವಾಗ್ದಾಳಿ ನಡೆಸಿದೆ.

'ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಪಾಲಿನ ಸ್ವೆಟರ್‌ಗಳನ್ನೂ ಬಿಡಲಿಲ್ಲ. ಬಡಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ. ಈಗ ರೈತರನ್ನೂ ಬಿಡದೆ ಲೂಟಿಗಿಳಿದಿದೆ. ಕೃಷಿ ಯಂತ್ರೋಪಕರಣ ಖರೀದಿ ಹಗರಣ ನಡೆದಿದ್ದರೂ ಬಸವರಾಜ ಬೊಮ್ಮಾಯಿ ಅವರು ಏನೂ ನಡೆದೇ ಇಲ್ಲವೆಂಬಂತೆ ವರ್ತಿಸಿ ಭ್ರಷ್ಟರಿಗೆ ಬೆಂಬಲ ಸೂಚಿಸಿದ್ದಾರೆ. ಭ್ರಷ್ಟಾಚಾರವೇ ಬಿಜೆಪಿಯ ಮನೆದೇವ್ರು' ಎಂದೂ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.