ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ರಾಜೀನಾಮೆ 

'ನನ್ನ ಮುಂದಿನ ನಡೆ ದೇವೆಗೌಡರ ಪಾಲಿಗೆ ಬಿಟ್ಟಿದ್ದೇನೆ'
Last Updated 31 ಮಾರ್ಚ್ 2022, 7:37 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನಸಿ.ಎಂ. ಇಬ್ರಾಹಿಂ ಅವರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.

ಬಳಿಕ ಮಾತನಾಡಿದ ಇಬ್ರಾಹಿಂ, 'ಗುರುವಾರದ ದಿನ ಎಲ್ಲ ಧರ್ಮಗಳಿಗೆ ಶ್ರೇಷ್ಠವಾದದ್ದು. ಇಂದು ರಾಜೀನಾಮೆ ಕೊಟ್ಟಿದ್ದೇನೆ, ನನ್ನ ಮುಂದಿನ ನಡೆ ಇಂದಿನಿಂದ ಆರಂಭ' ಎಂದು ಹೇಳಿದರು.

'ನನ್ನ ಮೇಲೆ ಏನು ಹೊರೆ ಇತ್ತು. ಅದನ್ನು ಕಳಚಿಕೊಂಡಿದ್ದೇನೆ. ನನ್ನ ಮುಂದಿನ ನಡೆಯನ್ನು ದೇವೆಗೌಡರ ಪಾಲಿಗೆ ಬಿಟ್ಟಿದ್ದೇನೆ. ಅವರು ಮಾರ್ಗದರ್ಶಕರು. ದೇಶಕ್ಕೆ ಮಾರ್ಗದರ್ಶನ ಕೊಟ್ಟವರು. ಕರ್ನಾಟಕ ರಾಜ್ಯದಲ್ಲಿ ವಯೋವೃದ್ಧರಾಜಕಾರಣಿ. ಅಜಾತ ಶತ್ರು' ಎಂದರು.

'ಯುಗಾದಿ ಮುಗಿದ ಮೇಲೆ ಎಪ್ರಿಲ್, ಮೇ ತಿಂಗಳಲ್ಲಿ ದೊಡ್ಡ ಪ್ರವಾಹ ಬರಲಿದೆ' ಎಂದ ಇಬ್ರಾಹಿಂ, 'ಸ್ವತಂತ್ರವಾಗಿ ನಾವೇ ಸರ್ಕಾರ ಮಾಡಬೇಕು ಎಂಬ ಶಕ್ತಿ ಜೆಡಿಎಸ್‌ಗೆ ಇದೆ. ಮೊದಲು ಜೆಡಿಎಸ್, ನಂತರ ಬಿಜೆಪಿ, ಕೊನೆಯಲ್ಲಿ ಕಾಂಗ್ರೆಸ್' ಎಂದು ಭವಿಷ್ಯ ನುಡಿದರು.

'ಯುಪಿ, ಪಂಜಾಬ್‌ನಲ್ಲಿ ಏನಾಯಿತೋ ಅದೇ ವಾತಾವರಣ ಕರ್ನಾಟಕದಲ್ಲೂ ಆಗಲಿದೆ. ನಾನು ಯಾವ ಪಕ್ಷವನ್ನು ಟೀಕೆ‌ ಮಾಡುವುದಿಲ್ಲ ಯಾರನ್ನೂ ನಿಂದಿಸುವುದಿಲ್ಲ. ಅನ್ಯರ ಡೊಂಕು ನೀವೇಕೆ ತಿದ್ದುವಿರಯ್ಯ' ಎಂದು ಬಸವಣ್ಣನ ವಚನವನ್ನು ಇಬ್ರಾಹಿಂ ಹೇಳಿದರು.

'ನನ್ನ ರಾಜೀನಾಮೆಯನ್ನು ಸಭಾಪತಿ ಅಂಗಿಕರಿಸಿದ್ದಾರೆ. ಇಷ್ಟು ದಿನ ಜೊತೆಗಿದ್ದ ಕಾಂಗ್ರೆಸ್ ಕಾರ್ಯಕರ್ತರು, ಒಳ್ಳೊಳ್ಳೆ ಸ್ನೇಹಿತರಿದ್ದರು. ನಾನಾಗಿಯೇ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಇನ್ಮುಂದೆ ಜನ ನನ್ನನ್ನು ಕೈಹಿಡಿಯುತ್ತಾರೆ. ಜನರಿಗೆ ನಾನು ಇಷ್ಟೇ ಹೇಳೋದು, ಎನ್ನ ನಾಮ ಕ್ಷೇಮಾ ನಿಮ್ಮದಯೇ, ಎನ್ನ ನಾಮ ಅಪಮಾನ ನಿಮ್ಮದಯೇ, ಎನ್ನ ಹಾನಿ ವೃದ್ಧಿ ನಿಮ್ಮದಯೇ, ಬಳ್ಳಿಗೆ ಕಾಯಿ ಧನ್ಯತೆ ಕೂಡಲಸಂಗಮದೇವ. ನಾನು ಕಾಯಿ ಇದ್ದ. ಹಾಗೇ ನೀವು ಬಳ್ಳಿ ಇದ್ದ ಹಾಗೇ. ಇಷ್ಟುದಿನ ನನ್ನನ್ನು ಕಾಪಾಡಿದ್ದೀರಾ' ಎಂದರು.

ರಾಜ್ಯದಲ್ಲಿ ಸಾಮರಸ್ಯ ಹದಗೆಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನಾನು ಬಿಜೆಪಿಯವರಿಗೆ ಮನವಿ ಮಾಡ್ತೀನಿ. ಮತೀಯ ಭಾವನೆ ಏಕೆ?ಅಮಿತ್ ಶಾ ಕೂಡಾ ಲೋಕಸಭೆಯಲ್ಲಿ‌ ಮಾತನಾಡುತ್ತಾ,ಹಿಂಸೆಯಿಂದ ಚುನಾವಣೆ ಗೆಲ್ಲೋದಿಲ್ಲ.‌ ನಾವು ತತ್ವ, ಸಿದ್ಧಾಂತದ ಮೇಲೆ ಚುನಾವಣೆ ಗೆಲ್ಲುತ್ತೇವೆ ಎಂದಿದ್ದಾರೆ. ದೊಡ್ಡವರೇ ಹಾಗೆಹೇಳುವಾಗ ನೀವು ಯಾಕೆ ಇಲ್ಲಿ ಈ ಕಟ್ಟು, ಆ ಕಟ್ಟು, ಚರಕ ಕಟ್ಟು, ತಲೆ ಕಟ್ಟು, ಮಲೆ ಕಟ್ಟು ಎಂದು ಸುಮ್ಮನೆ ಬೇಡದಿರುವ ವಿಷಯಗಳನ್ನೆಲ್ಲ ವಿವಾದ ಮಾಡುತ್ತಿದ್ದೀರಿ' ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT