ಗುರುವಾರ , ಆಗಸ್ಟ್ 11, 2022
24 °C

'ದೇವೇಗೌಡರ ಋಣ ನನ್ನ ಮೇಲಿತ್ತು ಆದರೆ, ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ದೇವೇಗೌಡರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ನಾನು ಬಿಜೆಪಿ ಅಭ್ಯರ್ಥಿ ಬಸವರಾಜ್ ಬೆಂಬಲಿಸಿದೆ. ಆದರೆ ದೇವೇಗೌಡರ ಬಗ್ಗೆ ಗೌರವ ಇದೆ. ನನ್ನ ಒಮ್ಮೆ ಅವರು ಶಾಸಕನನ್ನಾಗಿ ಮಾಡಿದ್ದರು. ಆ ಋಣ ಇದೆ. ಆದರೆ ಅವರ ಅಕ್ಕ ಪಕ್ಕ ಇದ್ದವರು ನಮ್ಮ ಮೇಲೆ ಚಾಡಿ ಹೇಳಿದರು. ನಾವು ದೂರವಾದೆವು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಜಣ್ಣ ಹೇಳಿದರು.

ಸಿದ್ದಗಂಗಾ ಮಠಕ್ಕೆ ಬಂದಾಗ ನನ್ನ ಪಕ್ಕದ ಮನೆಗೆ ದೇವೇಗೌಡರು ಬಂದರೂ ಕೂಡ ನಮ್ಮ‌ಮನೆಗೆ ಬರಲಿಲ್ಲ. ಕೆಲವನ್ನಷ್ಟೇ ನಂಬಿಕೊಂಡು ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಸೋತರು. ಅವರು ಈ ವಯಸ್ಸಿನಲ್ಲಿಯೂ ಹೋರಾಟ ಮಾಡುವ ಗುಣವನ್ನು ಮೆಚ್ಚುವೆ ಎಂದರು. 

ಶಾಸಕ ಶ್ರೀನಿವಾಸ್ ತಂದೆ ರಾಮೇಗೌಡರು ಗುಬ್ಬಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಶ್ರೀನಿವಾಸ್ ನಮ್ಮ ಹುಡುಗ ಎಂದರು.

ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಬಹಳಷ್ಟು ಜನರು ಹೊರ ಹೋಗುವರು, ಮತ್ತೆ ಕೆಲವರು ಪಕ್ಷಕ್ಕೆ ಬರುವರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು