ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Covid-19 Update: ರಾಜ್ಯದಲ್ಲಿ 1,978 ಹೊಸ ಪ್ರಕರಣಗಳು

Last Updated 11 ಜುಲೈ 2021, 15:14 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌–19 ದೃಢಪಟ್ಟ 1,978 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೊರೊನಾ ಸೋಂಕಿನಿಂದ 56 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು 36,737 ಪ್ರಕರಣಗಳು ಸಕ್ರಿಯವಾಗಿವೆ. ಕೋವಿಡ್‌ ಖಚಿತ ಪ್ರಕರಣಗಳ ಪ್ರಮಾಣ ಶೇ.1.24ರಷ್ಟಾಗಿದೆ ಹಾಗೂ ಮೃತಪಟ್ಟವರ ಪ್ರಮಾಣ ಶೇ 2.83ರಷ್ಟಿರುವುದು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಕಟಣೆಯಿಂದ ತಿಳಿದು ಬಂದಿದೆ.

24 ಗಂಟೆಗಳಲ್ಲಿ 2,326 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 28.71 ಲಕ್ಷ ಕೋವಿಡ್‌ ಪ್ರಕರಣಗಳ ಪೈಕಿ ಈವರೆಗೂ 27.98 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. 35,835 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಬೆಂಗಳೂರು ನಗರದಲ್ಲಿ 433 ಪ್ರಕರಣಗಳು, ಮೈಸೂರಿನಲ್ಲಿ 261 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 195 ಪ್ರಕರಣಗಳು, ಹಾಸನದಲ್ಲಿ 132 ಪ್ರಕರಣಗಳು, ಶಿವಮೊಗ್ಗದಲ್ಲಿ 124, ಬೆಳಗಾವಿಯಲ್ಲಿ 112 ಹಾಗೂ ತುಮಕೂರಿನಲ್ಲಿ 100 ಪ್ರಕರಗಳು ದಾಖಲಾಗಿವೆ.

ಕೋವಿಡ್‌–19 ರೂಪಾಂತರಗಳ ಪೈಕಿ ರಾಜ್ಯದಲ್ಲಿ ಈವರೆಗೆ ಆಲ್ಫಾ ಸ್ವರೂಪದ 140 ಪ್ರಕರಣಗಳು, 725 ಡೆಲ್ಟಾ ಪ್ರಕರಣಗಳು, 145 ಕಪ್ಪಾ ಪ್ರಕರಣಗಳು, ಎರಡು ಡೆಲ್ಟಾ ಪ್ಲಸ್‌ ಹಾಗೂ 6 ಬೀಟಾ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಾದ್ಯಂತ 2.56 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT