ನಗರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು 1,538 ಹಾಸಿಗೆಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಕಾಯ್ದರಿಸಲಾಗಿದೆ.ಅಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ 3,800 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ (ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು) ದಾಖಲಾಗುವವರ ದೈನಂದಿನ ಪ್ರಮಾಣವು ವಾರದಿಂದ ಈಚೆಗೆ 33ರಿಂದ 80ಕ್ಕೆ ಹೆಚ್ಚಿದೆ. 2021ರ ಡಿಸೆಂಬರ್ ಕೊನೆಯ ವಾರದಲ್ಲಿ ಈ ಪ್ರಮಾಣವು 21ರಿಂದ 26ಕ್ಕೆ ಹೆಚ್ಚಿತ್ತು.