ಶನಿವಾರ, ಆಗಸ್ಟ್ 13, 2022
24 °C

Covid-19 Karnataka Update | 9,464 ಕೋವಿಡ್ ಪ್ರಕರಣ ದೃಢ, 130 ಜನರು ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 9,464 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, 130 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 4,40,411ಕ್ಕೆ ಏರಿಕೆಯಾಗಿದೆ. ಒಟ್ಟಾರೆ 7,067 ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈವರೆಗೆ 3,34,999 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 98,326 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇದರಲ್ಲಿ 770 ಜನರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಗುಣಮುಖರಾಗಿ 12,545 ಜನರು ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಹೊಸದಾಗಿ 3,426 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 1,20,324 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1.63 ಲಕ್ಷದ ಗಡಿ ದಾಟಿದೆ. ಇಂದು 30 ಜನರು ಮೃತಪಟ್ಟಿದ್ದು, ಈವರೆಗೂ 2,370 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: 

ಬಾಗಲಕೋಟೆಯಲ್ಲಿ 188, ಬಳ್ಳಾರಿ 382, ಬೆಳಗಾವಿ 244, ಬೆಂಗಳೂರು ಗ್ರಾಮಾಂತರ 146, ಬೀದರ್ 61, ಚಾಮರಾಜನಗರ 45, ಚಿಕ್ಕಬಳ್ಳಾಪುರ 131, ಚಿಕ್ಕಮಗಳೂರು 89, ಚಿತ್ರದುರ್ಗ 247, ದಕ್ಷಿಣ ಕನ್ನಡ 446, ದಾವಣಗೆರೆ 297, ಧಾರವಾಡ 203, ಗದಗ 195, ಹಾಸನ 305, ಹಾವೇರಿ 240, ಕಲಬುರಗಿ 261, ಕೊಡಗು 18, ಕೋಲಾರ 70, ಕೊಪ್ಪಳ 171, ಮಂಡ್ಯ 131, ಮೈಸೂರು 676, ರಾಯಚೂರು 200, ರಾಮನಗರ 76, ತುಮಕೂರು 395, ಉಡುಪಿ 168, ಉತ್ತರ ಕನ್ನಡ 114, ವಿಜಯಪುರ 92 ಮತ್ತು ಯಾದಗಿರಿಯಲ್ಲಿ 98 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು