ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಗಾಂಧಿ ಮಗ ಸೇರಿ ಎಲ್ಲ ಮಕ್ಕಳಿಗೆ ಲಸಿಕೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

Last Updated 7 ಆಗಸ್ಟ್ 2021, 12:22 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌-19 ನಿಯಂತ್ರಣದ ಸಲುವಾಗಿ ದೇಶದಾದ್ಯಂತ ಇದುವರೆಗೆ ಬರೋಬ್ಬರಿ50 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ. ಇದೇ ವೇಳೆ ಆಡಳಿತಾರೂಢ ಬಿಜೆಪಿಯು, ವಿರೋಧ ಪಕ್ಷ ಕಾಂಗ್ರೆಸ್‌ ವಿರುದ್ಧ ಸರಣಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ ನಾಯಕರು ಲಸಿಕೆ ಅಭಿಯಾನದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಜನರನ್ನು ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದೆ.

ʼದೇಶದ ಶೇ. 70 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಲು ಹತ್ತು ವರ್ಷಬೇಕು ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸಿಗರೇ ಸ್ವಲ್ಪ ಕಣ್ಣುಬಿಟ್ಟು ನೋಡುವಿರಾ?ಮೋದಿ ಸರ್ಕಾರ ಕೇವಲ 205 ದಿನದಲ್ಲಿ 50 ಕೋಟಿ ಡೋಸ್ ಲಸಿಕೆ ನೀಡಿದೆ.ರಾಜೀವ್‌ ಗಾಂಧಿ ಪುತ್ರನೂ ಸೇರಿದಂತೆದೇಶದ ಎಲ್ಲರ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆʼ ಎಂದು ತಿರುಗೇಟು ನೀಡಿದೆ.

ಮತ್ತೊಂದು ಟ್ವೀಟ್‌ನಲ್ಲಿ, ʼಲಸಿಕೆ ವಿಚಾರದಲ್ಲಿ ಕಾಂಗ್ರೆಸ್‌ಸೃಷ್ಟಿಸಿದ ಸುಳ್ಳಿನ ಸರಮಾಲೆಗಳೆಲ್ಲ ಬುಡಮೇಲಾಗಿದೆ.ಮಾನ್ಯ ಸಿದ್ದರಾಮಯ್ಯನವರೇ, ನೀವು ಸೃಷ್ಟಿಸಿದ ಸುಳ್ಳುಗಳಿಗೆ ಈಗ ಉತ್ತರ ಲಭಿಸಿರಬಹುದಲ್ಲವೇ?ದೇಶದಲ್ಲಿ 50 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ, ನೀವು ಹೇಳಿದ ಸುಳ್ಳುಗಳು ನಿಜವಾಗಿದ್ದರೆ ಭಾರತ ಈ ಸಾಧನೆ ಮಾಡಲು ಸಾಧ್ಯವಿತ್ತೇ?ʼ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

ಮುಂದುವರಿದು, ʼಮಾನ್ಯ ಡಿ.ಕೆ.ಶಿವಕುಮಾರ್‌ ಅವರೇ,ಲಸಿಕೆ ವಿತರಣೆ ಸರಿಯಾದ ದಾರಿಯಲ್ಲೇ ಇದೆ, ನೀವು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದೀರಿ, ಅಷ್ಟೇ. ಕಡಿಮೆ ಅವಧಿಯಲ್ಲಿಯೇ ಮೋದಿ ಸರ್ಕಾರ 50 ಕೋಟಿ ಡೋಸ್‌ ಲಸಿಕೆ ವಿತರಿಸಿದೆ.ಲಸಿಕೆ ವಿತರಣೆ ವಿಚಾರದಲ್ಲಿ ನೀವು ಸುಳ್ಳುಗಳನ್ನು ವಿತರಣೆ ಮಾಡುತ್ತಿದ್ದೀರಿ, ಅದನ್ನು ನಿಲ್ಲಿಸುವಿರಾ?ʼ ಎಂದು ಕೇಳಿದೆ.

ಮೊದಲ 85 ದಿನಗಳಲ್ಲಿ 10 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ. ಬಳಿಕ 20 ಕೋಟಿ ಡೋಸ್ ತಲುಪಲು 45 ದಿನಗಳು, 30 ಕೋಟಿ ಡೋಸ್ ತಲುಪಲು 29 ದಿನಗಳು, 40 ಕೋಟಿ ಡೋಸ್ ತಲುಪಲು 24 ದಿನಗಳು ಹಾಗೂ 50 ಕೋಟಿ ಡೋಸ್ ತಲುಪಲು 20 ದಿನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT