ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಒಂದೇ ವಾರದಲ್ಲಿ ಶೇ 130ರಷ್ಟು ಏರಿಕೆ

Last Updated 3 ಜನವರಿ 2022, 5:37 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಶೇಕಡಾ 130 ರಷ್ಟು ಏರಿಕೆಯಾಗಿವೆ ಎಂಬುದು ಸರ್ಕಾರದ ಅಂಕಿಅಂಶಗಳಿಂದ ದೃಢವಾಗಿದೆ.

ಎರಡು ವಾರಗಳ ಹಿಂದೆ ರಾಜ್ಯದಲ್ಲಿ 2,160 ಪ್ರಕರಣಗಳು ದಾಖಲಾಗಿದ್ದವು. ಆದರೆ, ಡಿಸೆಂಬರ್ 27 ಮತ್ತು ಜನವರಿ 2 ರ ನಡುವಿನ ಒಂದು ವಾರದ ಅವಧಿಯಲ್ಲಿ 4,970 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಶೇ 76ರಷ್ಟು ಬೆಂಗಳೂರು ನಗರದಲ್ಲೇ ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇ 166ರಷ್ಟು ಏರಿದೆ.

ಭಾನುವಾರ ಪತ್ತೆಯಾದ 1,187 ಹೊಸ ಪ್ರಕರಣಗಳೊಂದಿಗೆ, ರಾಜ್ಯದ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 10,292 ಕ್ಕೆ ಏರಿವೆ.

ಕಳೆದ ವಾರ ರಾಜ್ಯವು ಪರೀಕ್ಷೆ ಪ್ರಮಾಣವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿತ್ತು. ಎರಡು ವಾರಗಳ ಹಿಂದೆ 6.74 ಲಕ್ಷ ಪರೀಕ್ಷೆಗಳು ನಡೆದಿದ್ದವು, ಕಳೆದ ವಾರ ಆ ಸಂಖ್ಯೆ 6.99 ಲಕ್ಷಗಳಿಗಷ್ಟೆ ಏರಿಕೆಯಾಗಿತ್ತು. ಆದರೂ, ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.

ಸೋಮವಾರದಿಂದ ರಾಜ್ಯದಲ್ಲಿ ಕೋವಿಡ್‌ ಪತ್ತೆ ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವುದಾಗಿಯೂ, ಮಾಸ್ಕ್‌ ಧರಿಸುವಿಕೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಮಾಡುವುದಾಗಿಯೂ ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT