ಗುರುವಾರ , ಮಾರ್ಚ್ 23, 2023
31 °C

Covid-19 Karnataka Update: 1,220 ಹೊಸ ಪ್ರಕರಣ, 19 ಸೋಂಕಿತರ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 1,220 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢ ಪಟ್ಟಿದೆ. 12 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರರ ಗಡಿಯೊಳಗೆ ಇವೆ.

ಈವರೆಗೆ ವರದಿಯಾದ ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ 29.53 ಲಕ್ಷಕ್ಕೆ ಏರಿಕೆ ಕಂಡಿದೆ.

ಒಂದು ದಿನದ ಅವಧಿಯಲ್ಲಿ 1.79 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ‌ಸೋಂಕು ದೃಢ ಪ್ರಮಾಣವು ಶೇ 0.68ರಷ್ಟು ವರದಿಯಾಗಿದೆ.

11 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ಹಾಗೂ 13 ಜಿಲ್ಲೆ ಗಳಲ್ಲಿ ಒಂದಂಕಿಯಲ್ಲಿದೆ.  ವಿಜಯ ಪುರ, ರಾಯಚೂರು ಹಾಗೂ ಬೀದರ್‌ ನಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ.

ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ 232, ಮೈಸೂರಿನಲ್ಲಿ 86 ಹಾಗೂ ಕೊಡಗಿನಲ್ಲಿ 64 ಪ್ರಕರಣಗಳು ಪತ್ತೆ ಯಾಗಿವೆ. ಬೆಂಗಳೂರಿನಲ್ಲಿ 319 ಮಂದಿ ಹಾಗೂ ಉಡುಪಿಯಲ್ಲಿ 150 ಮಂದಿ ಸೋಂಕಿತ ರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 100ರ ಗಡಿಯೊಳಗೆ ಇವೆ.

1,175 ಮಂದಿ ಚೇತರಿಸಿ ಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 28.97 ಲಕ್ಷ ದಾಟಿದೆ. ಸದ್ಯ 18,404 ಸಕ್ರಿಯ ಪ್ರಕರಣಗಳಿವೆ. ಬೀದರ್‌ ಜಿಲ್ಲೆ ಕೋವಿಡ್‌ ಮುಕ್ತವಾಗಿದೆ. ರಾಯಚೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು 50ರ ಒಳಗಡೆ ಇವೆ. 

ಕೋವಿಡ್ ಪೀಡಿತರಲ್ಲಿ 19 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 8 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ಮರಣ ಪ್ರಮಾಣ ದರವು ಶೇ 1.55ರಷ್ಟು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು