ಸೋಮವಾರ, ಏಪ್ರಿಲ್ 19, 2021
32 °C

Covid-19 Karnataka Updates: ರಾಜ್ಯದಲ್ಲಿಯೂ ಕೋವಿಡ್‌ ಏರಿಕೆಯ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವಂತೆಯೇ, ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಗುರುವಾರ ಹೊಸದಾಗಿ 783 ಜನರಿಗೆ ಕೋವಿಡ್‌ ದೃಢಪಟ್ಟಿದೆ.

ರಾಜ್ಯದಲ್ಲಿ ಈವರೆಗೂ ಕೊರೊನಾ ಲಸಿಕೆ ಪಡೆಯದ ಆರೋಗ್ಯ ಮತ್ತು ಮುಂಚೂಣಿ ಇಲಾಖೆಗಳ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಪಡೆಯಲು ಮತ್ತೊೊಮ್ಮೆೆ ಅವಕಾಶ ನೀಡಲಾಗಿದೆ. ಮೊದಲ ಹಂತದಲ್ಲಿ ಜನವರಿ 16 ರಿಂದ ಫೆ.25ವರೆಗೂ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. 

ಫೆಬ್ರುವರಿಯಿಂದ ಮುಂಚೂಣಿ ಕಾರ್ಯಕರ್ತರಿಗೂ ಲಸಿಕೆ ಆರಂಭವಾಗಿತ್ತು. ಆದರೆ, ನೋಂದಣಿಯಾಗಿದ್ದ ಏಳು ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ ಈವರೆಗೂ 4.74 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದಾಾರೆ. ಅಂತೆಯೇ ನೋದಣಿಯಾಗಿರುವ ಮೂರು ಲಕ್ಷಕ್ಕೂ ಅಧಿಕ ಮುಂಚೂಣಿ ಕಾರ್ಯಕರ್ತರ ಪೈಕಿ 1.71 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದಾಾರೆ. ಹೀಗಾಗಿಯೇ, ಮತ್ತೊೊಮ್ಮೆೆ ಅವಕಾಶ ಕಲ್ಪಿಿಸಲಾಗಿದೆ. ‘ಲಸಿಕೆ ಪಡೆಯದ ಆರೋಗ್ಯ ಮುಂಚೂಣಿ ಕಾರ್ಯಕರ್ತರು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ, ಖಾಸಗಿ ಆಸ್ಪತ್ರೆೆಯಲ್ಲಿ 250 ರೂ. ಶುಲ್ಕ ನೀಡಿ ಲಸಿಕೆ ಪಡೆಯಬುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾಾರೆ.

7388 ಸಾರ್ವಜನಿಕರಿಗೆ ಲಸಿಕೆ
ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ 11ನೇ ದಿನವಾದ ಗುರುವಾರ 60 ವರ್ಷ ಮೇಲ್ಪಟ್ಟ 6169 ಹಿರಿಯ ನಾಗರೀಕರು, 45- 59 ವರ್ಷದ ಆರೋಗ್ಯ ಸಮಸ್ಯೆೆ ಹೊಂದಿರುವ 1,219 ಮಂದಿ ಸೇರಿ 7,388 ಸಾರ್ವಜನಿಕರು ಲಸಿಕೆ ಪಡೆದಿದ್ದಾಾರೆ. ಒಟ್ಟಾಾರೆ ಈವರೆಗೂ ರಾಜ್ಯದಲ್ಲಿ 2,10,827 ಹಿರಿಯ ನಾಗರೀಕರು, 36,869 ಮಂದಿ ಆರೋಗ್ಯ ಸಮಸ್ಯೆೆಯಿಂದ ಬಳಲುತ್ತಿಿರುವವರು ಲಸಿಕೆ ಪಡೆದಂತಾಗಿದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು