ಬೆಂಗಳೂರು: ಎರಡನೇ ಅಲೆಯ ವೇಳೆಗೆ 0–6 ವಯಸ್ಸಿನ 57,364 ಮಕ್ಕಳು ಕೋವಿಡ್‌ನಿಂದ ಬಳಲಿದ್ದಾರೆ. 271 ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಿತಿಯ 37ನೇ ವರದಿಯನ್ನು ಸಮಿತಿ ಅಧ್ಯಕ್ಷೆ ಕೆ.ಪೂರ್ಣಿಮಾ ಅವರು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.

ಮನೆ ಮನೆಗೆ ತೆರಳಿ ಮಕ್ಕಳಲ್ಲಿರುವ ಅಪೌಷ್ಟಿಕತೆ ಕುರಿತು ಅಧ್ಯಯನ ಮಾಡಬೇಕು. ತೀವ್ರ ಅಪೌಷ್ಟಿಕತೆ ಸಮಸ್ಯೆ ಇರುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ಸ್ಥಾಪಿಸಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.

ಭಿಕ್ಷಾಟನೆ ನಡೆಸುವವರ ಹಿಂದೆ ದೊಡ್ಡ ಜಾಲ ಇದ್ದು, ಅದನ್ನು ಮಟ್ಟ ಹಾಕುವಲ್ಲಿ ಗೃಹ ಇಲಾಖೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿ, ಭಿಕ್ಷಾಟನೆ ಪ್ರೋತ್ಸಾಹಿಸುವ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳ
ಬೇಕು ಎಂದು ಸೂಚಿಸಿದೆ. ರಾಜ್ಯದಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆ ಮಾಡಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದೆ.

ಸಮಿತಿಯ ಇತರ ಶಿಫಾರಸುಗಳು

lಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಭಿಕ್ಷುಕರ ಪುನರ್‌ವಸತಿ ಕೆಲಸಗಳಿಗೆ ಇಲಾಖೆ ಸಮರ್ಪಕವಾಗಿ ಬಳಸಿ
ಕೊಳ್ಳಬೇಕು.

lಅಂಗವಿಕಲ ವ್ಯಕ್ತಿಗಳ ಹೆಸರಿನಲ್ಲಿಡುವ ಹೂಡಿಕೆಯ ಹಣವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಸಬೇಕು. 5 ವರ್ಷಗಳ ಠೇವಣಿ
ಮೊತ್ತವನ್ನು 10 ವರ್ಷಗಳ ವರೆಗೆ ವಿಸ್ತರಿಸಬೇಕು.

lಅಂಧ ಮಹಿಳೆಯರಿಗೆ ಜನಿಸುವ ಮಗುವಿಗೆ ಆರೈಕೆ ಮಾಡಲು ಪ್ರಸ್ತುತ ನೀಡುತ್ತಿರುವ ಆರೈಕೆ ಭತ್ಯೆಯನ್ನು ₹2 ಸಾವಿರದಿಂದ ₹4 ಸಾವಿರಕ್ಕೆ ಹೆಚ್ಚಿಸಬೇಕು. ಈ ಹಣವನ್ನು 5 ವರ್ಷಗಳ ಬದಲಿಗೆ 10 ವರ್ಷಗಳಿಗೆ ವಿಸ್ತರಿಸಬೇಕು. ಈ ಸೌಲಭ್ಯವನ್ನು ಕನಿಷ್ಠ ಎರಡು ಮಕ್ಕಳಿಗೆ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.