ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸಾ ದರ ಹೆಚ್ಚಳ: ರಾಜ್ಯ ಸರ್ಕಾರ ಆದೇಶ

Last Updated 6 ಮೇ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೋವಿಡ್‌ ರೋಗಿಗಳ ಚಿಕಿತ್ಸಾ ದರದಲ್ಲಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಜನರಲ್‌ ವಾರ್ಡ್‌ನ ಪ್ರತಿದಿನದ ಚಿಕಿತ್ಸಾ ವೆಚ್ಚ ಈ ಹಿಂದೆ ₹ 5,200 ಇದ್ದು, ಅದನ್ನೇ ಮುಂದುವರಿಸಲಾಗಿದೆ. ಎಚ್‌ಡಿಯು ವಾರ್ಡ್‌ನ ಪ್ರತಿ ದಿನದ ದರವನ್ನು ₹ 7,000ದಿಂದ ₹ 8,000ಕ್ಕೆ ಹೆಚ್ಚಿಸಲಾಗಿದೆ.

ವೆಂಟಿಲೇಟರ್‌ ರಹಿತ ತೀವ್ರ ನಿಗಾ ಘಟಕದ ವೆಚ್ಚವನ್ನು ₹ 8,500ದಿಂದ ₹ 9000ಕ್ಕೆ ಮತ್ತು ವೆಂಟಿಲೇಟರ್‌
ಸಹಿತ ತೀವ್ರ ನಿಗಾ ಘಟಕದ ಚಿಕಿತ್ಸಾ ವೆಚ್ಚವನ್ನು ₹ 10,000ದಿಂದ ₹ 11,500ಕ್ಕೆ ಏರಿಕೆ ಮಾಡಲಾಗಿದೆ.

‘ಪರಿಷ್ಕೃತ ದರವು ಪಿಪಿಇ ಕಿಟ್‌ ಹಾಗೂ ಪರಿಕರಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕ ಆರೋಗ್ಯ ಪ್ರಾಧಿಕಾರದಿಂದ ಶಿಫಾರಸುಗೊಂಡಿರುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಈ ದರವನ್ನೇ ವಿಧಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT